Close Menu
New Karnataka
    What's Hot

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

      August 30, 2026

      ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

      August 29, 2026

      ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

      August 26, 2026

      ಎಂದೂ ಕುಗ್ಗದ ಬಿಸಿನೆಸ್‌: ಮಹಿಳೆಯರಿಗೆ ಹೆಚ್ಚು ಲಾಭ ತರುವ ‘ಟೈಲರಿಂಗ್ ಉದ್ಯಮ’

      August 23, 2026

      Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

      August 20, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಹೊಸ ವಿನ್ಯಾಸ, ಅದೇ ಕದರ್‌ನೊಂದಿಗೆ ಮತ್ತೆ ಮರಳುತ್ತಿದೆ ಒಂದು ಕಾಲದ ಭಾರತದ ಅಚ್ಚುಮೆಚ್ಚಿನ SUV ರೆನಾಲ್ಟ್‌ ಡಸ್ಟರ್.
    Auto

    ಹೊಸ ವಿನ್ಯಾಸ, ಅದೇ ಕದರ್‌ನೊಂದಿಗೆ ಮತ್ತೆ ಮರಳುತ್ತಿದೆ ಒಂದು ಕಾಲದ ಭಾರತದ ಅಚ್ಚುಮೆಚ್ಚಿನ SUV ರೆನಾಲ್ಟ್‌ ಡಸ್ಟರ್.

    ರೆನಾಲ್ಟ್ ಡಸ್ಟರ್ ಹೊಸ ರೂಪದಲ್ಲಿ ಭಾರತಕ್ಕೆ ವಾಪಸ್ಸು ಬರುತ್ತಿದೆ. ಹೊಸ ವಿನ್ಯಾಸ, ಪವರ್‌ಫುಲ್ ಎಂಜಿನ್ ಮತ್ತು ಆಧುನಿಕ ಫೀಚರ್‌ಗಳೊಂದಿಗೆ ಡಸ್ಟರ್ ಮತ್ತೆ ಗ್ರಾಹಕರ ಮನ ಗೆಲ್ಲಲು ಸಜ್ಜಾಗಿದೆ.
    New KarnatakaBy New KarnatakaNovember 1, 2025Updated:February 2, 20262 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಭಾರತದ SUV ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಕ್ರಾಂತಿಯನ್ನು ಉಂಟುಮಾಡಿದ್ದ ರೆನಾಲ್ಟ್ ಡಸ್ಟರ್ ಮತ್ತೆ ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿದೆ. 2012ರಲ್ಲಿ ಭಾರತದಲ್ಲಿ ಆರಂಭವಾದ ಈ ಐಕಾನಿಕ ಮಾಡೆಲ್, ಕಾಂಪ್ಯಾಕ್ಟ್ SUV ವರ್ಗದಲ್ಲಿ ಹೊಸ ಚಾಪನ್ನು ಮೂಡಿಸಿತ್ತು. ಈಗ, 2026ರ ಜನವರಿ 26ರಂದು ಗಣತಂತ್ರ ದಿನದಂದು, ಹೊಸ ಜನರೇಷನ್ ರೆನಾಲ್ಟ್ ಡಸ್ಟರ್ ಅನ್ನು ಭಾರತದಲ್ಲಿ ಪ್ರಸ್ತುತಪಡಿಸುತ್ತಿದೆ ಎಂದು ರೆನಾಲ್ಟ್ ಕಂಪನಿ ಅಧಿಕೃತವಾಗಿ ಘೋಷಿಸಿದೆ. ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಮತ್ತು ಆಧುನಿಕ ತಂತ್ರಜ್ಞಾನಗಳೊಂದಿಗೆ ಡಸ್ಟರ್ ಹೊಸ ರೂಪದಲ್ಲಿ ಬರುತ್ತಿರುವುದು ಕಾರು ಪ್ರೇಮಿಗಳಲ್ಲಿ ಬಾರೀ ನಿರೀಕ್ಷೆ ಹುಟ್ಟು ಹಾಕಿದೆ.

    ಡಸ್ಟರ್‌ನ ಇತಿಹಾಸ ಮತ್ತು ಜನಪ್ರಿಯತೆ
    ರೆನಾಲ್ಟ್ ಡಸ್ಟರ್ ಭಾರತದಲ್ಲಿ ಬಂದಿದ್ದು 2012ರಲ್ಲಿ, ಮತ್ತು ಅದು ತಕ್ಷಣವೇ ಜನಪ್ರಿಯಗೊಂಡಿತು. ಅದರ ಗಟ್ಟಿಯಾದ ಬಿಲ್ಡ್ ಕ್ವಾಲಿಟಿ, ಉತ್ತಮ ಆಫ್-ರೋಡ್ ಸಾಮರ್ಥ್ಯ ಮತ್ತು ಕೈಗೆಟುಕುವ ಬೆಲೆಯು ಅದನ್ನು ಮಧ್ಯಮ ವರ್ಗದ ಕುಟುಂಬಗಳಿಗೆ ಉತ್ತಮ ಆಯ್ಕೆಯಾಗಿತ್ತು. ಲಕ್ಷಾಂತರ ಯೂನಿಟ್‌ಗಳು ಮಾರಾಟವಾಗಿ, ಇದು‌ ಟಾಟಾ, ಹ್ಯುಂಡೈ ಮತ್ತು ಮಹಿಂದ್ರ ನಂತಹ SUV ಮಾಡೆಲ್ ಸ್ಪರ್ಧಿಗಳಿಗೆ ಸವಾಲು ಮೂಡಿಸುತ್ತಿತ್ತು. ಆದರೆ ಕೆಲವು ವರ್ಷಗಳ ನಂತರ, ಮಾರುಕಟ್ಟೆಯ ಬದಲಾವಣೆಗಳಿಂದಾಗಿ ಇದು ಭಾರತದಿಂದ ಹೊರಹೊಮ್ಮಿತು. ಈಗ, ಹೊಸ ಆವೃತ್ತಿಯೊಂದಿಗೆ ಅದರ ಮರಳುವಿಕೆ SUV ಪ್ರೇಮಿಗಳಿಗೆ ಖುಷಿಯ ಸುದ್ದಿಯಾಗಿದೆ.

    ಇದನ್ನೂ ಓದಿ: Ola, Uber ನಂತೆಯೇ ಕೇಂದ್ರ ಸರ್ಕಾರದ ʼಭಾರತ್ ಟ್ಯಾಕ್ಸಿʼ; ಇಲ್ಲಿ ಚಾಲಕರೇ ಸಂಸ್ಥೆಯ ಸಹಮಾಲಿಕರು

    ಹೊಸ ಡಸ್ಟರ್‌ನ ವೈಶಿಷ್ಟ್ಯಗಳು: ಆಧುನಿಕತೆ ಮತ್ತು ಶಕ್ತಿ
    ಹೊಸ ಜನರೇಷನ್ ಡಸ್ಟರ್ CMF-B ಪ್ಲಾಟ್‌ಫಾರ್ಮ್ ಮೇಲೆ ನಿರ್ಮಿತವಾಗಿದ್ದು, ಇದು ಹೆಚ್ಚಿನ ಸುರಕ್ಷತೆ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ. ಕಂಪನಿಯ ಟೀಸರ್ ವೀಡಿಯೋಗಳ ಪ್ರಕಾರ, ಇದರ ವಿನ್ಯಾಸ ಹೆಚ್ಚು ಪವರ್‌ ಫುಲ್ ಮತ್ತು ಹೆಚ್ಚು ಆಧುನಿಕತೆಯನ್ನು ಹೊಂದಿದೆ, ಟರ್ಬೊ-ಪೆಟ್ರೋಲ್ ಇಂಜಿನ್‌ಗಳೊಂದಿಗೆ ಸಜ್ಜುಗೊಂಡಿರುತ್ತದೆ.

    ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ನಂತಹ ಸುರಕ್ಷತಾ ವೈಶಿಷ್ಟ್ಯಗಳು, ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಮನಮೋಹಕ ಇಂಟೀರಿಯರ್ ಈ ಕಾರನ್ನು ಇನ್ನೂ ಹೆಚ್ಚು ಆಕರ್ಷಕವನ್ನಾಗಿ ಮಾಡುತ್ತವೆ. ಇಂಧನ ದಕ್ಷತೆ ಮತ್ತು ಪರಿಸರ ಸೌಹಾರ್ದ್ಯದ(Eco Friendly) ಮೇಲೆ ಒತ್ತು ನೀಡಲಾಗಿದ್ದು, ಇದು ಭಾರತದ ರಸ್ತೆಗಳ ಸವಾಲುಗಳಿಗೆ ಸರಿಹೊಂದುತ್ತದೆ. ಬೆಲೆಯು ಸುಮಾರು 10-12 ಲಕ್ಷ ರೂಪಾಯಿಗಳಿಂದ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ, ಇದು ಕಾರು ಮಾರುಕಟ್ಟೆಯಲ್ಲಿ ದೊಡ್ಡ ಪ್ರಭಾವ ಬೀರುವುದಂತೂ ಖಂಡಿತ.

    rising from the dust. ready to make a splash once again. the icon returns, bold as ever. #RenaultDuster #comingsoon pic.twitter.com/UccVSq6VdK

    — Renault India (@RenaultIndia) October 28, 2025

    ಭಾರತೀಯ SUV ಮಾರುಕಟ್ಟೆಗೆ ಪರಿಣಾಮ
    ಹೊಸ ಡಸ್ಟರ್‌ನ ಆಗಮನವು ಭಾರತದ SUV ವಿಭಾಗವನ್ನು ಮತ್ತೆ ಉತ್ಸಾಹಿಸುತ್ತದೆ. ಸದ್ಯ ಭಾರತದ SUV ಮಾರುಕಟ್ಟೆಯನ್ನು ಆಳುತ್ತಿರುವ ಕ್ರೆಟಾ, ಇನೋವಾ, XUV 700 ಮತ್ತು ಇತರ ಮಾಡೆಲ್‌ಗಳೊಂದಿಗೆ ಸ್ಪರ್ಧೆಯು ತೀವ್ರಗೊಳ್ಳುತ್ತದೆ, ಇದರಿಂದ ಗ್ರಾಹಕರಿಗೆ ಹೆಚ್ಚು ಆಯ್ಕೆಯ ಅವಕಾಶಗಳು ಮತ್ತು ವಾಹನಗಳಿಗೆ ಹಾಕುವ ಬಂಡವಾಳಗಳು ಉತ್ತಮ ಮೌಲ್ಯವನ್ನು ನೀಡುತ್ತದೆ. ರೆನಾಲ್ಟ್‌ನ ಈ ಹೆಜ್ಜೆಯು ಕಂಪನಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಲವಾದ ಕಮ್‌ ಬ್ಯಾಕ್ ನೀಡುವುದಂತೂ ಪಕ್ಕಾ.

    ಒಟ್ಟಾರೆ ರೆನಾಲ್ಟ್ ಡಸ್ಟರ್‌ನ ಮರಳುವಿಕೆಯು ಭಾರತೀಯ ಆಟೋಮೊಬೈಲ್ ಪ್ರೇಮಿಗಳಿಗೆ ಒಂದು ಉತ್ಸಾಹಕರ ಸುದ್ದಿ. 2026ರ ಗಣತಂತ್ರ ದಿನದಂದು ಆಗುವ ಆವಿಷ್ಕಾರವು ಈ SUVನ ಹೊಸ ಅಧ್ಯಾಯವನ್ನು ತೆರೆಯಲಿದೆ. ಹೆಚ್ಚಿನ ವಿವರಗಳಿಗಾಗಿ ರೆನಾಲ್ಟ್‌ನ ಅಧಿಕೃತ ವೆಬ್‌ಸೈಟ್ಅ ನ್ನು ಪರಿಶೀಲಿಸಿ. ಡಸ್ಟರ್ ಮತ್ತೆ ಭಾರತದ ರಸ್ತೆಗಳನ್ನು ವಶಪಡಿಸಿಕೊಳ್ಳಲು ಕಾಯುತ್ತಿದೆ – ನೀವು ಸಿದ್ಧರಾಗಿದ್ದೀರಾ?

    auto news automobile new suv india new suv launch in india Renault Duster 2025 Renault Duster 2026 renault duster kannada news Renault Duster launch India
    Share. Facebook Twitter WhatsApp LinkedIn Email
    Previous ArticleOla, Uber ನಂತೆಯೇ ಕೇಂದ್ರ ಸರ್ಕಾರದ ʼಭಾರತ್ ಟ್ಯಾಕ್ಸಿʼ; ಇಲ್ಲಿ ಚಾಲಕರೇ ಸಂಸ್ಥೆಯ ಸಹಮಾಲಿಕರು
    Next Article ಒಡಿಶಾ ಕಡಲು ತೀರಗಳಲ್ಲಿ 7 ತಿಂಗಳ ಮೀನುಗಾರಿಕೆ ನಿಷೇಧ: ಆಲಿವ್ ರಿಡ್ಲಿ ಆಮೆಗಳ ಸಂರಕ್ಷಣೆಗೆ ಮಹತ್ವದ ನಿರ್ಧಾರ.

    Related Posts

    Auto

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026
    Auto

    ದೆಹಲಿ ಹೊಸ ಇವಿ ನೀತಿ ಪ್ರಕಟ: ಎಲೆಕ್ಟ್ರಿಕ್ ವಾಹನಗಳಿಗೆ 100% ತೆರಿಗೆ ವಿನಾಯಿತಿ, ಬಂಪರ್ ಸಬ್ಸಿಡಿ!

    July 1, 2026
    Auto

    ಪೆಟ್ರೋಲ್ ಬೆಲೆ ಏರಿಕೆ ಎಫೆಕ್ಟ್: ಭಾರತದಲ್ಲಿ EV ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ!

    June 14, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Our Picks

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.