ಸ್ವಯಂ ಉದ್ಯೋಗವನ್ನು ಅರಸುತ್ತಿರುವ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಬೆಂಗಳೂರಿನ ಪ್ರಖ್ಯಾತ ರುಡ್‌ಸೆಟ್ (RUDSET) ಸಂಸ್ಥೆಯು ಸಂಪೂರ್ಣ ಉಚಿತವಾಗಿ “ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಸೇವೆ” (CCTV Installation & Service) ತರಬೇತಿಯನ್ನು ಆಯೋಜಿಸಿದೆ.
ತರಬೇತಿಯ ವಿವರಗಳು:
ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ನಡೆಯುತ್ತಿರುವ ಈ ತರಬೇತಿ ಶಿಬಿರದಲ್ಲಿ, ಕೇವಲ ಸಿಸಿಟಿವಿ ಮಾತ್ರವಲ್ಲದೆ, ಸೆಕ್ಯೂರಿಟಿ ಅಲಾರಾಂ (Security Alarm) ಮತ್ತು ಸ್ಮೋಕ್ ಡಿಟೆಕ್ಟರ್ (Smoke Detector) ಅಳವಡಿಕೆಯ ಕುರಿತು ತರಬೇತಿ ನೀಡಲಾಗುತ್ತದೆ.
ಇಂದಿನ ದಿನಗಳಲ್ಲಿ ಭದ್ರತೆಯ ದೃಷ್ಟಿಯಿಂದ ಪ್ರತಿಯೊಂದು ಮನೆ, ಕಚೇರಿ ಮತ್ತು ಅಂಗಡಿಗಳಿಗೆ ಸಿಸಿಟಿವಿ ಅತ್ಯಗತ್ಯವಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರಿಗೆ ಸ್ವಯಂ ಉದ್ಯೋಗದ ವಿಫಲ ಅವಕಾಶಗಳಿವೆ.
ತರಬೇತಿಯ ವಿಶೇಷತೆಗಳು:
ಅವಧಿ: 13 ದಿನಗಳು.
ದಿನಾಂಕ: 28ನೇ ಜನವರಿ 2026 ರಿಂದ 09ನೇ ಫೆಬ್ರವರಿ 2026 ರವರೆಗೆ.
ಸೌಲಭ್ಯಗಳು: ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಊಟ, ವಸತಿ ಮತ್ತು ಸಮವಸ್ತ್ರವನ್ನು ಸಂಪೂರ್ಣ ಉಚಿತವಾಗಿ ಸಂಸ್ಥೆಯೇ ಒದಗಿಸುತ್ತದೆ.
ಹೆಚ್ಚುವರಿ ಕಲಿಕೆ: ತಾಂತ್ರಿಕ ಕೌಶಲ್ಯದ ಜೊತೆಗೆ ವ್ಯಕ್ತಿತ್ವ ವಿಕಸನ (Personality Development) ಮತ್ತು ಉದ್ಯಮಶೀಲತೆ ಅಭಿವೃದ್ಧಿಯ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಅಭ್ಯರ್ಥಿಯ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 50 ವರ್ಷದೊಳಗಿರಬೇಕು.
ಗ್ರಾಮೀಣ ಪ್ರದೇಶದ ಬಿಪಿಎಲ್ (BPL) ರೇಷನ್ ಕಾರ್ಡ್ ಅಥವಾ ನರೇಗಾ (NREGA) ಜಾಬ್ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಸ್ಥಳ: ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ – 562123.
ನೋಂದಣಿ ಮಾಡುವುದು ಹೇಗೆ?
ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
94815 06564
93801 62042
91138 80324
ಸ್ವಂತ ಕಾಲಿನ ಮೇಲೆ ನಿಲ್ಲಲು ಬಯಸುವ ಯುವಕ-ಯುವತಿಯರು ಈ ಉಚಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಿ.
