Close Menu
New Karnataka
    What's Hot

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

      July 15, 2026

      ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

      July 14, 2026

      ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

      July 14, 2026

      ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

      July 13, 2026

      KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!

      July 13, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!
    Jobs

    KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!

    New KarnatakaBy New KarnatakaJuly 13, 20263 Mins Read
    Share WhatsApp Facebook Twitter LinkedIn Telegram Email
    KSP KSRP Constable Jobs 2026
    Share
    WhatsApp Facebook Twitter LinkedIn Email

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹರಸುತ್ತಿರುವ ಯುವಜನತೆಗೆ ಇದೊಂದು ಸುವರ್ಣಾವಕಾಶ ಒದಗಿ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕಲ್ಯಾಣ ಕರ್ನಾಟಕ (KK) ಮತ್ತು ಉಳಿಕೆ ಮೂಲ ವೃಂದದ (RPC) ಒಟ್ಟು 2314 ವಿವಿಧ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಈ ನೇಮಕಾತಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

    ಖಾಲಿ ಇರುವ ಹುದ್ದೆಗಳ ವಿವರ

    ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ:

    • ಕಲ್ಯಾಣ ಕರ್ನಾಟಕ (KK) ವೃಂದ: ಈ ಭಾಗದಲ್ಲಿ ಒಟ್ಟು 859 ಹುದ್ದೆಗಳಿವೆ. ಇದರಲ್ಲಿ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೇಬಲ್ (ಕೆ.ಎಸ್.ಆರ್.ಪಿ) – 334 ಹುದ್ದೆಗಳು ಸೇರಿವೆ. ಹಾಗೆಯೇ, ಪೊಲೀಸ್ ಕಾನ್‌ಸ್ಟೇಬಲ್ (ಕೆ.ಎಸ್.ಐ.ಎಸ್.ಎಫ್) – 364 ಹುದ್ದೆಗಳು ಹಾಗೂ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೇಬಲ್ (ಭಾರತೀಯ ಮೀಸಲು ಪಡೆ – ಐ.ಆರ್.ಬಿ) – 161 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
    • ಮಿಕ್ಕುಳಿದ ವೃಂದ (RPC – ನಾನ್ ಕೆಕೆ): ಈ ವಿಭಾಗದಲ್ಲಿ ಕೇವಲ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೇಬಲ್ (ಕೆ.ಎಸ್.ಆರ್.ಪಿ) ವೃಂದಕ್ಕೆ ಒಟ್ಟು 1455 ಹುದ್ದೆಗಳನ್ನು ಮೀಸಲಿಡಲಾಗಿದೆ.

    ಪ್ರಮುಖ ದಿನಾಂಕಗಳು

    ಎರಡೂ ಅಧಿಸೂಚನೆಗಳಿಗೂ ಒಂದೇ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು, ವಿವರಗಳು ಹೀಗಿವೆ:

    • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ: 13-07-2026.
    • ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 10-08-2026.
    • ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 11-08-2026.
    • ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 20-09-2026.

    ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ

    • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪಿಯುಸಿ (2nd PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು.
    • ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ 33 ವರ್ಷಗಳ ಗರಿಷ್ಠ ವಯೋಮಿತಿಯನ್ನು ನೀಡಲಾಗಿದೆ.
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 35 ವರ್ಷಗಳು ಗರಿಷ್ಠ ವಯೋಮಿತಿಯಾಗಿದೆ.
    • ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 38 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

    ಇದನ್ನೂ ಓದಿ: ಅರ್ಬನ್ ಸಹಕಾರಿ ಬ್ಯಾಂಕ್‌ನಲ್ಲಿ ನೇಮಕಾತಿ: ಪದವೀಧರರಿಗೆ ಮತ್ತು ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ!

    ಅರ್ಜಿ ಶುಲ್ಕದ ವಿವರ

    • ಸಾಮಾನ್ಯ ಅರ್ಹತೆ ಹಾಗೂ ಇತರೆ ಪ್ರವರ್ಗಗಳ (2A, 2B, 3A, 3B) ಅಭ್ಯರ್ಥಿಗಳಿಗೆ ರೂ. 750/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದ್ದು, ರೂ. 500/- ಪಾವತಿಸಬೇಕಾಗುತ್ತದೆ.

    ಪರೀಕ್ಷಾ ವಿಧಾನ ಹಾಗೂ ಆಯ್ಕೆ ಪ್ರಕ್ರಿಯೆ

    ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಆಫ್‌ಲೈನ್-ಒಎಂಆರ್ (Offline-OMR) ಮಾದರಿಯ ಲಿಖಿತ ಪರೀಕ್ಷೆಯ ಮೂಲಕ ಕೈಗೊಳ್ಳಲಾಗುವುದು. ಲಿಖಿತ ಪರೀಕ್ಷೆಯು ಸಾಮಾನ್ಯ ಅಧ್ಯಯನ ಮತ್ತು ಮಾನಸಿಕ ಸಾಮರ್ಥ್ಯ ವಿಷಯಗಳನ್ನೊಳಗೊಂಡಿದ್ದು, ಒಟ್ಟು 100 ಅಂಕಗಳಿಗೆ 90 ನಿಮಿಷಗಳ ಕಾಲಾವಧಿಯಲ್ಲಿ ನಡೆಯಲಿದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ (Negative Valuation).

    ಇದನ್ನೂ ಓದಿ:ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ 2026: 572 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಮತ್ತು ಮೀಸಲಾತಿಗನುಗುಣವಾಗಿ ಖಾಲಿ ಹುದ್ದೆಗಳಿಗೆ 1:5 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ (PET & PST) ಕರೆಯಲಾಗುತ್ತದೆ. ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 168 ಸೆಂ.ಮೀ ಎತ್ತರ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 158 ಸೆಂ.ಮೀ ಎತ್ತರ ನಿಗದಿಪಡಿಸಲಾಗಿದೆ. ದೈಹಿಕ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮ ನೇಮಕಾತಿ ಮಾಡಿಕೊಳ್ಳಲಾಗುವುದು.

    ವೇತನ ಶ್ರೇಣಿ

    ಆಯ್ಕೆಯಾಗುವ ಕಾನ್‌ಸ್ಟೇಬಲ್ ಅಭ್ಯರ್ಥಿಗಳಿಗೆ ಮಾಸಿಕ ರೂ. 37,500 ರಿಂದ ರೂ. 76,100/- ವರೆಗಿನ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಜೊತೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯವೂ ಅನ್ವಯವಾಗುತ್ತದೆ.

    ಇದನ್ನೂ ಓದಿ: 1600 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ 2026

    ಇದು ಪೊಲೀಸ್ ಇಲಾಖೆಯ ಉದ್ಯೋಗವನ್ನು ಎದುರುನೋಡುತ್ತಿರುವವರಿಗೆ ಉತ್ತಮ ಅವಕಾಶವಾಗಿದೆ. ಆಸಕ್ತರು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾಗಿ ತಯಾರಿ ನಡೆಸಲು ಸಲಹೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ಗೆ https://cetonline.karnataka.gov.in/kea/indexnew ಭೇಟಿ ನೀಡಿ ಸಂಪೂರ್ಣ ಅಧಿಸೂಚನೆಯನ್ನು ಓದಿಕೊಳ್ಳಬಹುದು.

    ಇದನ್ನೂ ಓದಿ: ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026: 775 ಅರಣ್ಯ ವೀಕ್ಷಕ ಹುದ್ದೆಗಳಿಗೆ ಬೃಹತ್ ಅವಕಾಶ | Apply Online

    2nd PUC jobs in Karnataka IRB police jobs Karnataka Karnataka government jobs Karnataka Police Constable jobs KEA police exam 2026 KSISF constable vacancies KSP apply online KSP Recruitment 2026 KSRP recruitment 2026 ಕರ್ನಾಟಕ ಪೊಲೀಸ್ ನೇಮಕಾತಿ 2026 ಕರ್ನಾಟಕ ಸರ್ಕಾರಿ ಉದ್ಯೋಗ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳು
    Share. Facebook Twitter WhatsApp LinkedIn Email
    Previous ArticleKEA Surveyor Recruitment 2026: ಕಂದಾಯ ಇಲಾಖೆಯಲ್ಲಿ 750 ಭೂಮಾಪಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ!
    Next Article ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

    Related Posts

    Jobs

    KEA Surveyor Recruitment 2026: ಕಂದಾಯ ಇಲಾಖೆಯಲ್ಲಿ 750 ಭೂಮಾಪಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ!

    July 12, 2026
    Jobs

    KEA ನೇಮಕಾತಿ 2026: ವಸತಿ ಶಾಲೆಗಳಲ್ಲಿ 1087 ಶಿಕ್ಷಕರ ಹುದ್ದೆಗಳಿಗೆ ಬೃಹತ್ ಅರ್ಜಿ ಆಹ್ವಾನ

    July 12, 2026
    Jobs

    ಶಿರಸಿ ಅರ್ಬನ್ ಬ್ಯಾಂಕ್‌ನಲ್ಲಿ ನೇಮಕಾತಿ: ಪದವೀಧರರಿಗೆ ಮತ್ತು ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ!

    July 11, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Our Picks

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.