ಕಲೆಕ್ಟಿವ್ ಮೀಡಿಯಾ ನೆಟ್‌ವರ್ಕ್ ಭಾರತದ ಅತ್ಯಂತ ಪ್ರಸಿದ್ಧ ಮಹಾಕಾವ್ಯ – ಮಹಾಭಾರತವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತವಾಗಿ ಪುನರ್‌ಸೃಷ್ಠಿಸಿರುವ ಒಂದು ಐತಿಹಾಸಿಕ ಯೋಜನೆಯನ್ನು ಅನೌನ್ಸ್ ಮಾಡಿದೆ. ಈ ಸರಣಿಯು 2025ರ ಅಕ್ಟೋಬರ್ 25 ರಂದು WAVES OTT ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಡಿಜಿಟಲ್ ಪ್ರೀಮಿಯರ್ ಆಗಲಿದ್ದು, ನಂತರ 2025ರ ನವೆಂಬರ್ 2 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಈ ಸರಣಿಯು ಭಾರತ ಮತ್ತು ವಿಶ್ವಾದ್ಯಂತ ಡಿಜಿಟಲ್ ಪ್ರೇಕ್ಷಕರಿಗೆ WAVES OTT ಮೂಲಕ ಏಕಕಾಲದಲ್ಲಿ ಲಭ್ಯವಿರುತ್ತದೆ.

ಇದೇ ಮೊದಲ ಬಾರಿಗೆ ಒಡಂಬಡಿಕೆ ಮಾಡಿಕೊಂಡ ಕಲೆಕ್ಟಿವ್ ಮೀಡಿಯಾ ನೆಟ್‌ವರ್ಕ್ ಮತ್ತು ಭಾರತದ ಸಾರ್ವಜನಿಕ ಪ್ರಸಾರಕ ಸಂಸ್ಥೆ ಪ್ರಸಾರ ಭಾರತಿಯ ಐತಿಹಾಸಿಕ ಸಹಭಾಗಿತ್ವವು ಭಾರತದ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಯ ಮುಂದಿಡಲು ಸಜ್ಜಾಗಿದೆ. ಸುಧಾರಿತ AI ತಂತ್ರಜ್ಞಾನವನ್ನು ಬಳಸಿಕೊಂಡು, ಈ ಸರಣಿಯು ವಿಶಾಲವಾದ ಮಹಾಭಾರತದ ಜಗತ್ತನ್ನು, ಅದರ ಪಾತ್ರಗಳನ್ನು, ಯುದ್ಧಭೂಮಿಗಳನ್ನು, ಭಾವನೆಗಳನ್ನು ಮತ್ತು ನೈತಿಕ ಸಂಕಟಗಳನ್ನು ಸಿನಿಮಾಟಿಕ್ ಅನುಭವ ಮತ್ತು ಆಕರ್ಷಕ ವಾಸ್ತವಿಕತೆಯೊಂದಿಗೆ ಪುನರ್‌ಸೃಷ್ಠಿಸುತ್ತದೆ. ಈ ಯೋಜನೆಯು ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದ ಚೈತನ್ಯವನ್ನು ಸಾಕಾರಗೊಳಿಸುತ್ತದೆ, ಪರಂಪರೆ ಮತ್ತು ಆಧುನಿಕತೆಯ ಆವಿಷ್ಕಾರವು ಒಟ್ಟಿಗೆ ಮುನ್ನಡೆಯಬಹುದು ಎಂಬುದನ್ನು ಪ್ರದರ್ಶಿಸುತ್ತದೆ.
ಇದನ್ನೂ ಓದಿ: ಥಿಯೇಟರ್‌ನಲ್ಲಿ ಇದೊಂದು ಕೆಲಸ ಮಾತ್ರ ಮಾಡಬೇಡಿ; ಕಾಂತಾರ ಚಿತ್ರ ತಂಡದಿಂದ ಅಭಿಮಾನಿಗಳಲ್ಲಿ ಮನವಿ
ಈ ಸಹಭಾಗಿತ್ವ ಬಗ್ಗೆ ಮಾತನಾಡುತ್ತಾ, ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ “ಪ್ರಸಾರ ಭಾರತಿಯು ಯಾವಾಗಲೂ ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಮಹತ್ವದ ಕಥೆಗಳನ್ನು ಪ್ರತಿ ಭಾರತೀಯ ಕುಟುಂಬಕ್ಕೆ ತಲುಪಿಸಿದೆ. ಲಾಕ್‌ಡೌನ್ ಸಮಯದಲ್ಲಿ ಮೂಲ ಮಹಾಭಾರತದ ಮರುಪ್ರಸಾರವು ಈ ಕಥೆಗಳು ಕುಟುಂಬಗಳನ್ನು ಮತ್ತು ಪೀಳಿಗೆಗಳನ್ನು ಎಷ್ಟು ಗಾಢವಾಗಿ ಬಂಧಿಸುತ್ತವೆ ಎಂಬುದನ್ನು ನಮಗೆ ನೆನಪಿಸಿತು. ಈ AI-ಆಧಾರಿತ ಪುನರ್‌ಕಲ್ಪನೆಯು ಪ್ರೇಕ್ಷಕರಿಗೆ ಭಾರತದ ಅತ್ಯಂತ ಶ್ರೇಷ್ಠ ಮಹಾಕಾವ್ಯವನ್ನು ಹೊಸ ರೀತಿಯಲ್ಲಿ ಅನುಭವಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು
ಈ ಸಹಭಾಗಿತ್ವದ ಬಗ್ಗೆ, ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್‌ವರ್ಕ್‌ನ ಸಂಸ್ಥಾಪಕ ಮತ್ತು ಗ್ರೂಪ್ CEO ವಿಜಯ್ ಸುಬ್ರಮಣ್ಯಂ “ಕೋಟ್ಯಂತರ ಭಾರತೀಯರಂತೆ, ನಾನು ಪ್ರತಿ ಭಾನುವಾರ ಟೆಲಿವಿಷನ್‌ನಲ್ಲಿ ಕ್ಲಾಸಿಕ್ ಮಹಾಭಾರತವನ್ನು ನೋಡುತ್ತಾ ಬೆಳೆದೆ. ಇದು ನನ್ನ ಕಲ್ಪನೆಯನ್ನು ಮತ್ತು ನಮ್ಮ ಸಂಸ್ಕೃತಿಯೊಂದಿಗಿನ ಸಂಪರ್ಕವನ್ನು ರೂಪಿಸಿದ ಒಂದು ಅನುಭವವಾಗಿತ್ತು. ನಮಗೆ ಆ ಅವಕಾಶ ಒದಗಿದಂತೆಯೇ ಇಂದಿನ ಪೀಳಿಗೆಗೆ ಆ ಆಕರ್ಷಕ ಅನುಭವದ ಮತ್ತು ಒಗ್ಗೂಡುವಿಕೆಯ ಒಂದು ಸ್ಪರ್ಶವನ್ನು ನೀಡುವ ಆಶಯವಿದೆ, ಆ ಕೆಲಸವನ್ನು ಇಂದಿನ ತಂತ್ರಜ್ಞಾನದ ಸಾಧ್ಯತೆಗಳ ಮೂಲಕ ಹೇಳಲಾಗುತ್ತದೆ.ʼʼ ಎಂದು ಹೇಳಿದರು.
WAVES, ಪ್ರಸಾರ ಭಾರತಿಯ ಅಧಿಕೃತ OTT ಪ್ಲಾಟ್‌ಫಾರ್ಮ್, ಭಾರತದ ಶ್ರೀಮಂತ ಸಾಂಸ್ಕೃತಿಕ, ಸುದ್ದಿ ಮತ್ತು ಮನರಂಜನೆಯನ್ನು ಒಂದು ಡಿಜಿಟಲ್ ತಾಣದಲ್ಲಿ ಒಟ್ಟುಗೂಡಿಸುತ್ತದೆ. ವೀಡಿಯೊ-ಆನ್-ಡಿಮಾಂಡ್, ಲೈವ್ ಈವೆಂಟ್‌ಗಳು ಮತ್ತು ಟಿವಿ, ರೇಡಿಯೋ, ಆಡಿಯೋ ಮತ್ತು ನಿಯತಕಾಲಿಕೆಗಳ ವಿಶಾಲ ಸಂಗ್ರಹವನ್ನು ಒಳಗೊಂಡಿರುವ WAVES, ವಿಶ್ವಾಸಾರ್ಹ, ಕುಟುಂಬ-ಸ್ನೇಹಿ ಮತ್ತು ಬಹುಭಾಷಾ ಕಂಟೆಂಟ್ ಗಳಿಂದಾಗಿ ಕೋಟ್ಯಂತರ ಬಳಕೆದಾರರನ್ನು ಶೀಘ್ರವಾಗಿ ಆಕರ್ಷಿಸಿದೆ.