Close Menu
New Karnataka
    What's Hot

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

      July 15, 2026

      ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

      July 14, 2026

      ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

      July 14, 2026

      ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

      July 13, 2026

      KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!

      July 13, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಪ್ರಪಂಚದ ಮೂಲೆ ಮೂಲೆ ಪರಿಚಯಿಸುವ ಕನ್ನಡದ ಟಾಪ್‌ ಟ್ರಾವೆಲ್ Youtube ಚಾನೆಲ್‌ಗಳು
    Lifestyle

    ಪ್ರಪಂಚದ ಮೂಲೆ ಮೂಲೆ ಪರಿಚಯಿಸುವ ಕನ್ನಡದ ಟಾಪ್‌ ಟ್ರಾವೆಲ್ Youtube ಚಾನೆಲ್‌ಗಳು

    New KarnatakaBy New KarnatakaNovember 3, 2025Updated:February 2, 20264 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಪ್ರಪಂಚ ಸುತ್ತುವ ಟ್ರಾವೆಲ್ YouTubers ತಮ್ಮ ವಿಡಿಯೋಗಳ ಮೂಲಕ ನಮ್ಮನ್ನು ವಿದೇಶಗಳ ಸಂಸ್ಕೃತಿ ಮತ್ತು ದೈನಂದಿನ ಜೀವನಶೈಲಿಯ ಆಳವಾದ ಜಗತ್ತಿಗೆ ಕೊಂಡೊಯ್ಯುತ್ತಾರೆ. ಅವರ ವೀಡಿಯೋಗಳ ಮೂಲಕ ನಾವು ದೂರದ ಗ್ರಾಮಗಳ ಜನರ ದಿನಚರಿಯನ್ನು, ಅವರ ಸ್ಥಳೀಯ ಭಾಷೆಗಳ ಸೊಗಸು, ಸಾಂಸ್ಕೃತಿಕ ಆಚರಣೆಗಳನ್ನು ಮತ್ತು ಸಾಮಾನ್ಯ ಜನರ ಜೀವನದ ಸುಂದರತೆಯನ್ನು ತಿಳಿದುಕೊಳ್ಳುತ್ತೇವೆ. ಇದು ನಮಗೆ ಮನೆಯಲ್ಲೆ ಕುಳಿತುಕೊಂಡೇ ವಿಶ್ವವನ್ನು ಅನ್ವೇಷಿಸುವ ಅವಕಾಶ ನೀಡಿ, ಸಾಂಸ್ಕೃತಿಕ ಜ್ಞಾನವನ್ನು ಹೆಚ್ಚಿಸಿ, ನಮ್ಮ ಮನಸ್ಸನ್ನು ವಿಸ್ತರಿಸುವಂತೆ ಮಾಡುತ್ತದೆ. ಈ ರೀತಿಯ ವೀಡಿಯೋಗಳು ನಮ್ಮನ್ನು ಒಂದು ಚಿಕ್ಕ ಪ್ರವಾಸಕ್ಕೆ ತೆಗೆದುಕೊಂಡು ಹೋಗಿ, ವೈವಿಧ್ಯಮಯ ಜೀವನದ ಬಗ್ಗೆ ಆಸಕ್ತಿ ಹುಟ್ಟಿಸುವಂತೆ ಮಾಡುತ್ತದೆ. ಅದೇ ರೀತಿ ನಮ್ಮ ಕನ್ನಡದ ಯೂಟ್ಯೂಬರ್ಸಗಳೂ ತಮ್ಮ ವಿಡಿಯೋಗಳ ಮೂಲಕ ಕನ್ನಡಿಗರನ್ನು ಪ್ರಪಂಚ ಸುತ್ತಿಸುತ್ತಿದ್ದಾರೆ.

    ಕನ್ನಡ ಭಾಷೆಯಲ್ಲೇ ಜಗತ್ತಿನ ಮೂಲೆ ಮೂಲೆಯ ಸ್ಥಳಗಳು, ಸಂಸ್ಕೃತಿಗಳು, ಪರಂಪರೆಗಳು ಮತ್ತು ವಿಭಿನ್ನ ಜನಾಂಗಗಳ ಕುರಿತು ಅದ್ಭುತ ಮಾಹಿತಿಯನ್ನು ನೀಡುವ ಮೂಲಕ ಲಕ್ಷಾಂತರ ಕನ್ನಡಿಗರನ್ನು ತಲುಪಿದ ಟಾಪ್ 7 ಟ್ರಾವೆಲ್ ಯೂಟ್ಯೂಬರ್‌ಗಳ ವಿವರವಾದ ಪರಿಚಯ ಇಲ್ಲಿದೆ. ಇವರು ಕೇವಲ ಸ್ಥಳಗಳನ್ನು ತೋರಿಸುವುದಲ್ಲದೆ, ಆ ದೇಶಗಳ ಜೀವನಶೈಲಿ, ಆಹಾರ ಮತ್ತು ಇತಿಹಾಸದ ಬಗ್ಗೆ ಆಳವಾದ ಮಾಹಿತಿಯನ್ನು ನೀಡುತ್ತಾರೆ.

    • Dr Bro (ಡಾ. ಬ್ರೋ)
      ಗಗನ್ ಶ್ರೀನಿವಾಸ್ ನಡೆಸುವ ಡಾ. ಬ್ರೋ ಚಾನೆಲ್ ಕನ್ನಡದ ಅತ್ಯಂತ ಜನಪ್ರಿಯ ಟ್ರಾವೆಲ್ ಚಾನೆಲ್‌ಗಳಲ್ಲಿ ಒಂದಾಗಿದೆ. ಇವರ ವಿಭಿನ್ನ ಮತ್ತು ಸಾಹಸಮಯ ಪ್ರವಾಸಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಇವರು ಪ್ರಸ್ತುತ (ಅಕ್ಟೋಬರ್ 2025 ರ ಮಾಹಿತಿ ಪ್ರಕಾರ) 2.9 ಮಿಲಿಯನ್‌ಗಿಂತಲೂ ಹೆಚ್ಚು (29 ಲಕ್ಷಕ್ಕೂ ಹೆಚ್ಚು) ಚಂದಾದಾರರನ್ನು ಹೊಂದಿದ್ದಾರೆ. ಇವರ ಮುಖ್ಯ ಚಾನೆಲ್‌ನಲ್ಲಿ ಸುಮಾರು 175 ಕ್ಕೂ ಹೆಚ್ಚು ವೀಡಿಯೊಗಳು ಲಭ್ಯವಿದೆ.
      ಪಾಕಿಸ್ತಾನಕ್ಕೆ ಪ್ರವೇಶಿಸುವ ವೀಡಿಯೊ, ತಾಲಿಬಾನ್‌ ಬೀದಿಗಳಲ್ಲಿ ಬಂದೂಕುಧಾರಿಗಳ ಸಂಭಾಷಣೆಗಳ ವೀಡಿಯೊ, ಮನುಷ್ಯರನ್ನು ತಿನ್ನುವ ಕಾಡು ಜನಾಂಗಗಳ ಬಗ್ಗೆ, ನೈಜಿರಿಯಾದ ಅತಿದೊಡ್ಡ ತೇಲುವ ಸ್ಲಮ್‌ ಬಗ್ಗೆ, ಪ್ರವಾಸಿಗಳೇ ಹೋಗದ ಅಥವಾ ಪ್ರವಾಸ ಮಾಡಲು ಭಯಾನಕವೆನಿಸುವ ದೇಶಗಳಲ್ಲೂ ಇವರು ತಮ್ಮ ಜೀವವನ್ನೇ ಪಣವಿಟ್ಟು ಮಾಡಿರುವ ರೋಚಕ ವೀಡಿಯೊ ಸರಣಿಗಳನ್ನು ನೋಡಲೇಬೇಕು.
    • Flying Passport (ಫ್ಲೈಯಿಂಗ್ ಪಾಸ್‌ಪೋರ್ಟ್)
      ಕಿರಣ್ ಮತ್ತು ಆಶಾ ದಂಪತಿ ನಡೆಸುವ ಈ ಚಾನೆಲ್, ಅಂತರರಾಷ್ಟ್ರೀಯ ಪ್ರಯಾಣಕ್ಕೆಂದೇ ಮೀಸಲಾದ ಮೊದಲ ಕನ್ನಡ ಟ್ರಾವೆಲ್ ಚಾನೆಲ್ ಎಂದು ಜನಪ್ರಿಯವಾಗಿದೆ. ಇವರು ಪ್ರಸ್ತುತ 711K (7.11 ಲಕ್ಷಕ್ಕೂ ಹೆಚ್ಚು) ಚಂದಾದಾರರನ್ನು ಹೊಂದಿದ್ದಾರೆ.
      ಚಾನೆಲ್‌ನಲ್ಲಿ ಒಟ್ಟೂ 435 ಕ್ಕೂ ಹೆಚ್ಚು ವೀಡಿಯೊಗಳು ಲಭ್ಯವಿದೆ. ವಿಶೇಷವಾಗಿ ಉತ್ತರ ಕೋರಿಯಾಕ್ಕೆ ಬೇಟಿ ನೀಡಿದ ವೀಡಿಯೊ, ಅಮೇಜಾನ್‌ ಅರಣ್ಯಗಳಲ್ಲಿ ಸಂಚರಿಸುವ ವೀಡಿಯೊ, ಅಪ್ಘಾನಿಸ್ತಾನದ ತಾಲಿಬಾನ್‌ ನಾಡಿನಲ್ಲಿ ಚಿತ್ರೀಕರಿಸಿದ ವೀಡಿಯೊಗಳು ನೋಡಲು ಕುತೂಹಲ ಹುಟ್ಟಿಸುತ್ತದೆ. ಹಾಗೆಯೇ ಜಗತ್ತಿನ ಶೀಮಂತ ದೇಶಗಳ ವೈಭವವನ್ನು ತಮ್ಮ ವೀಡಿಯೊಗಳಲ್ಲಿ ತೋರಿಸಿದ್ದಾರೆ.
    • Global Kannadiga (ಗ್ಲೋಬಲ್ ಕನ್ನಡಿಗ)
      ಮಹಾಬಲ ರಾಮ್ ಅವರು ಪ್ರಪಂಚದ 197 ದೇಶಗಳ ಬಗ್ಗೆ ಮಾಹಿತಿ ನೀಡುವ ಗುರಿಯೊಂದಿಗೆ ಈ ಚಾನೆಲ್ ನಡೆಸುತ್ತಿದ್ದಾರೆ.
      ಇವರ ಚಂದಾದಾರರ ಸಂಖ್ಯೆ 426K (4.26 ಲಕ್ಷಕ್ಕೂ ಹೆಚ್ಚು). ಈ ಚಾನೆಲ್‌ನಲ್ಲಿ 515 ಕ್ಕೂ ಹೆಚ್ಚು ವೀಡಿಯೊಗಳು ಲಭ್ಯವಿದೆ. ಇವರ ಪ್ರಪಂಚದ ಅತೀ ಶೀತ ಪ್ರದೇಶ ಓಮಿಯಾಕನ್‌ ನಲ್ಲಿ -72 ಡಿಗ್ರಿ ಸೆಲ್ಸಿಯಸ್‌ ನಲ್ಲಿ ಮಾಡಿದ ವೀಡಿಯೊ ರೋಮಾಂಚಕ ಅನುಭವವನ್ನು ನೀಡುತ್ತದೆ. ಬ್ಯಾಂಕಾಕ್‌ ನ ರಾತ್ರಿ ದುನಿಯಾ, ಮಡಗಾಸ್ಕರ್‌ ಟೂರಿಸಮ್‌, ಜಗತ್ತಿನ ಕ್ರೂರ ಕಾಡು ಜನಾಂಗ ಸೂರಿ ಜನಾಂಗಗಳ ಬಗ್ಗೆ ಮಾಡಿದ ವೀಡಿಯೊಗಳು ಲಕ್ಷ ಲಕ್ಷ ವಿಕ್ಷಣೆ ಕಂಡಿದೆ. ಇರಾನ್‌, ಇಸ್ರೆಲ್‌, ಅಪ್ಘಾನ್‌ ನಂತಹ ಅಪಾಯಕಾರಿ ದೇಶಗಳಿಗೂ ಇವರು ಬೇಟಿ ನೀಡಿ ತಮ್ಮ ಅನುಭವ ಹಂಚಿಕೊಂಡ ವೀಡಿಯೊಗಳು ಲಭ್ಯವಿದೆ.
    • Wandering Kannadigas (ವಾಂಡರಿಂಗ್ ಕನ್ನಡಿಗರು)
      ಜರ್ಮನಿಯಲ್ಲಿ ವಾಸವಾಗಿರುವ ಮಾನಸ ಮತ್ತು ಉದಯ್ ದಂಪತಿಗಳು ಯೂರೋಪ್‌ನ ಸುಂದರ ಸ್ಥಳಗಳು ಮತ್ತು ಅಲ್ಲಿನ ಜೀವನಶೈಲಿಯನ್ನು ಕನ್ನಡದಲ್ಲಿ ಪರಿಚಯಿಸುತ್ತಾರೆ. ಇವರು 110K (1.10 ಲಕ್ಷಕ್ಕೂ ಹೆಚ್ಚು) ಚಂದಾದಾರರನ್ನು ಹೊಂದಿದ್ದಾರೆ. ಚಾನೆಲ್‌ನಲ್ಲಿ 247 ಕ್ಕೂ ಹೆಚ್ಚು ವೀಡಿಯೊಗಳು ಲಭ್ಯವಿದೆ. ಇತ್ತೀಚೆಗೆ ಸ್ವಿಟ್ಜರ್ಲ್ಯಾಂಡ್ (Switzerland), ಲೈಕ್ಟೆನ್‌ಸ್ಟೈನ್ (Liechtenstein) ಮತ್ತು ಜರ್ಮನಿಯ ಹಳ್ಳಿಗಳ ಬಗ್ಗೆ ವ್ಲಾಗ್‌ಗಳನ್ನು ಮಾಡಿದ್ದಾರೆ. ಸ್ಪೇನ್‌, ಆಸ್ಟ್ರಿಯಾ, ಫ್ರಾನ್ಸ್‌ ಗಳ ವೀಡಿಯೋಗಳನ್ನು ಇವರ ಚಾನೆಲ್ನಲ್ಲಿ ವಿಕ್ಷಿಸಬಹುದು. ಯುರೋಪ್‌ ದೇಶಗಳ ಸೌಂದರ್ಯಗಳನ್ನು ಇವರ ವಿಡಿಯೋಗಳಲ್ಲಿ ಕಣ್ತುಂಬಿಸಿಕೊಳ್ಳಬಹುದು.
    • Yatra Films (ಯಾತ್ರಾ ಫಿಲಂಸ್)
      ಈ ಚಾನೆಲ್ ಉತ್ತರ ಭಾರತದ ಅಪರೂಪದ ಸ್ಥಳಗಳು ಮತ್ತು ಇತ್ತೀಚೆಗೆ ವಿದೇಶಿ ಸ್ಥಳಗಳನ್ನು ಪರಿಚಯಿಸುತ್ತಿದೆ.
      ಇವರ ಚಂದಾದಾರರ ಸಂಖ್ಯೆ 25K (25 ಸಾವಿರಕ್ಕೂ ಹೆಚ್ಚು). ಇವರ ಚಾನೆಲ್‌ನಲ್ಲಿ 154 ಕ್ಕೂ ಹೆಚ್ಚು ವೀಡಿಯೊಗಳು ಲಭ್ಯವಿದೆ.
      “ಭಾರತದಲ್ಲಿರುವ ಕೊನೆಯ ಹಳ್ಳಿ” (ಚಿತ್ಕುಲ್ ಕುರಿತು – 348K ವೀಕ್ಷಣೆಗಳು) ಮತ್ತು “ಭಾರತದಲ್ಲಿನ ಅತೀ ದೊಡ್ಡ ಸ್ಲಮ್ ಧಾರಾವಿ, ಮುಂಬೈ” (379K ವೀಕ್ಷಣೆಗಳು) ಜನಪ್ರಿಯವಾಗಿವೆ. ಇತ್ತೀಚೆಗೆ ವಿಯೆಟ್ನಾಂ ಮತ್ತು ಹಿಮಾಲಯದ ಮಠ, ಸ್ಪಿತಿ ಕಣಿವೆಗಳ ಪ್ರವಾಸ ಸರಣಿಗಳನ್ನು ಮಾಡಿದ್ದಾರೆ. ಇವರ ಕನ್ನಡ ವಿವರಣಾ ಶೈಲಿ ಇಷ್ಟವಾಗುತ್ತದೆ.
    • KITHADI KIRAN (ಕಿತ್ತಾಡಿ ಕಿರಣ್)
      ವೃತ್ತಿಯಲ್ಲಿ ನ್ಯಾಯವಾದಿಯಾದ ಕಿರಣ್ ಅವರು ಪ್ರವಾಸ ಮತ್ತು ರಸ್ತೆ ಪ್ರಯಾಣದ (Road Trip) ವ್ಲಾಗ್‌ಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಇವರ ಚಂದಾದಾರರ ಸಂಖ್ಯೆ 264K (2.63 ಲಕ್ಷಕ್ಕೂ ಹೆಚ್ಚು). ಚಾನೆಲ್‌ನಲ್ಲಿ 1.3K (1300 ಕ್ಕೂ ಹೆಚ್ಚು) ವೀಡಿಯೊಗಳು ಲಭ್ಯವಿದೆ. ಇತ್ತೀಚೆಗೆ ಬೆಂಗಳೂರಿನಿಂದ ಸ್ಪಿತಿ ಕಣಿವೆಗೆ ತಮ್ಮ ಮಾರುತಿ ಸುಜುಕಿ ಜಿಮ್ನಿ (Jimny) ನಲ್ಲಿ ಪ್ರಯಾಣಿಸಿದ್ದು ಮತ್ತು ಚೀನಾದ ಪ್ರವಾಸಗಳ ಬಗ್ಗೆ ಸರಣಿಗಳನ್ನು ಮಾಡಿದ್ದಾರೆ. ಮತ್ತು ಶ್ರೀಲಂಕಾ ಪ್ರವಾಸದ ಸರಣಿಗಳು ಮುಂದುವರೆಯುತ್ತಿದೆ. ತಮ್ಮ ಬೈಕ್‌, ಕಾರುಗಳಲ್ಲೇ ಪ್ರಯಾಣಿಸುವ ಇವರ ಅನೇಕ ರೋಡ್‌ ಟ್ರಿಪ್‌ ವೀಡಿಯೊಗಳನ್ನು ವಿಕ್ಷಿಸಬಹುದು.

    ಇದನ್ನೂ ಓದಿ :ಗೂಗಲ್ ಮತ್ತು ಜಿಯೋದಿಂದ ಭರ್ಜರಿ ಗಿಫ್ಟ್: 18 ತಿಂಗಳ ಜೆಮಿನಿ AI ಪ್ರೊ ಉಚಿತ! ಕೂಡಲೇ ಆಕ್ಟಿವೇಟ್‌ ಮಾಡಿಕೊಳ್ಳಿ

    • ALL IN ONE JAI (ಆಲ್ ಇನ್ ಒನ್ ಜೈ)
      ಜೈ ಅವರು ತಮ್ಮ ಚಾನೆಲ್‌ನಲ್ಲಿ ಪ್ರಯಾಣ, ಸ್ಥಳೀಯ ಜೀವನ ಮತ್ತು ಬೀದಿ ಆಹಾರದ ವ್ಲಾಗ್‌ಗಳನ್ನು ಹಂಚಿಕೊಳ್ಳುತ್ತಾರೆ.
      ಇವರ ಚಂದಾದಾರರ ಸಂಖ್ಯೆ 61.1K (61 ಸಾವಿರಕ್ಕೂ ಹೆಚ್ಚು). ಇವರ ಚಾನೆಲ್‌ನಲ್ಲಿ ಸುಮಾರು 69 ವೀಡಿಯೊಗಳು ಲಭ್ಯವಿದೆ.
      ಇವರ ಬೆಂಗಳೂರಿನ ರಾತ್ರಿ ಜೀವನ (Night Life) (1.6M ವೀಕ್ಷಣೆಗಳು) ಮತ್ತು ಬ್ಯಾಂಕಾಕ್‌ನ ರಾತ್ರಿ ಜೀವನ (Bangkok Night Life) (1.4M ವೀಕ್ಷಣೆಗಳು) ಕುರಿತ ವೀಡಿಯೊಗಳು ಹೆಚ್ಚು ಜನಪ್ರಿಯವಾಗಿವೆ. ಇತ್ತೀಚೆಗೆ ಕಾಂಬೋಡಿಯಾ (Cambodia) ಮತ್ತು ವಿಯೆಟ್ನಾಂ ದೇಶಗಳ ಪ್ರವಾಸ ಮಾಡಿದ್ದಾರೆ.

    ಕನ್ನಡದ ಈ ಟ್ರಾವೆಲ್ ಯೂಟ್ಯೂಬರ್‌ಗಳು ತಮ್ಮದೇ ಆದ ವಿಭಿನ್ನ ಶೈಲಿ ಮತ್ತು ಕಥೆ ಹೇಳುವ ಮೂಲಕ ಪ್ರಪಂಚದ ವೈವಿಧ್ಯತೆಯನ್ನು ಕನ್ನಡಿಗರಿಗೆ ಪರಿಚಯಿಸುತ್ತಿದ್ದಾರೆ. ಇವರ ವೀಡಿಯೊಗಳು ಕೇವಲ ಮನರಂಜನೆ ನೀಡದೆ, ಪ್ರವಾಸ ಮಾಡಲು ಪ್ರೇರಣೆಯನ್ನೂ ನೀಡುತ್ತವೆ.

    dr bro youtube chanel flying passport global kannadiga kannada top travel youtube chanels top kannada youtubers travel blog kannada travel news in kannada travel vlogs world travel videos
    Share. Facebook Twitter WhatsApp LinkedIn Email
    Previous Articleಇಸ್ರೋದಿಂದ ಭಾರತದ ಅತ್ಯಂತ ಭಾರವಾದ ಉಪಗ್ರಹ CMS-03 ಯಶಸ್ವಿಯಾಗಿ ಉಡಾವಣೆ
    Next Article ಅಕ್ಟೋಬರ್‌ 2025 Car Sales Report ; ಜಿಎಸ್ಟಿ ವಿನಾಯಿತಿಯಿಂದ ದಾಖಲೆಯ ಸಂಖ್ಯೆಯ ಕಾರುಗಳ ಮಾರಾಟ, SUV ಗಳದ್ದೇ ಆಧಿಪತ್ಯ

    Related Posts

    Lifestyle

    ವಿ-ಗಾರ್ಡ್‌ನಿಂದ ಹೊಸ ‘Emocia’ ಏರ್ ಫ್ರೈಯರ್ ಬಿಡುಗಡೆ: ಬೆಲೆ ಮತ್ತು ಫೀಚರ್ಸ್ ಇಲ್ಲಿದೆ!

    July 9, 2026
    Lifestyle

    ವೃತ್ತಿ ಮತ್ತು ಜೀವನದಲ್ಲಿ ಗೆಲ್ಲಲು 35ರ ವಯಸ್ಸಿನೊಳಗೆ ಕಲಿಯಬೇಕಾದ 15 ಮಾನಸಿಕ ತಂತ್ರಗಳು.

    July 5, 2026
    Lifestyle

    ಬೆಳಗಿನ ಉಪಹಾರಕ್ಕೆ ರುಚಿಯಾದ ಮತ್ತು ಸುಲಭವಾದ ಹೋಟೆಲ್ ಶೈಲಿಯ ಶಾವಿಗೆ ಬಾತ್ ಮಾಡುವ ವಿಧಾನ

    June 29, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Our Picks

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.