Close Menu
New Karnataka
    What's Hot

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

      August 30, 2026

      ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

      August 29, 2026

      ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

      August 26, 2026

      ಎಂದೂ ಕುಗ್ಗದ ಬಿಸಿನೆಸ್‌: ಮಹಿಳೆಯರಿಗೆ ಹೆಚ್ಚು ಲಾಭ ತರುವ ‘ಟೈಲರಿಂಗ್ ಉದ್ಯಮ’

      August 23, 2026

      Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

      August 20, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » Ai ಜಗತ್ತಿಗೆ ಕಾಲಿಟ್ಟ ಫುಟ್ಬಾಲ್ ದಿಗ್ಗಜ: Perplexity Ai ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಹೂಡಿಕೆ
    Tech

    Ai ಜಗತ್ತಿಗೆ ಕಾಲಿಟ್ಟ ಫುಟ್ಬಾಲ್ ದಿಗ್ಗಜ: Perplexity Ai ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಹೂಡಿಕೆ

    New KarnatakaBy New KarnatakaDecember 5, 2025Updated:February 2, 20262 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೋ ರೊನಾಲ್ಡೊ, ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ ಉದ್ಯಮ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಅವರು ಸಿಲಿಕಾನ್ ವ್ಯಾಲಿಯ ಪ್ರಮುಖ ಕೃತಕ ಬುದ್ಧಿಮತ್ತೆ (Artificial Intelligence) ಕಂಪನಿಯಾದ ‘ಪರ್ಪ್ಲೆಕ್ಸಿಟಿ ಎಐ’ (Perplexity AI) ನಲ್ಲಿ ಹೂಡಿಕೆ ಮಾಡುವ ಮೂಲಕ ತಂತ್ರಜ್ಞಾನ ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ.

    ಏನಿದು ಪರ್ಪ್ಲೆಕ್ಸಿಟಿ ಎಐ (Perplexity AI)?
    ಪರ್ಪ್ಲೆಕ್ಸಿಟಿ Ai ಒಂದು ಅತ್ಯಾಧುನಿಕ ‘ಸರ್ಚ್ ಇಂಜಿನ್’ (Search Engine) ಆಗಿದ್ದು, ಇದು ಗೂಗಲ್ (Google) ಮತ್ತು ಚಾಟ್‌ಜಿಪಿಟಿ (ChatGPT) ಯಂತಹ ದಿಗ್ಗಜ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ನಾವು ಕೇಳುವ ಪ್ರಶ್ನೆಗಳಿಗೆ ನೇರವಾದ ಉತ್ತರಗಳನ್ನು ನೀಡುವುದು ಮತ್ತು ಆ ಮಾಹಿತಿಯ ಮೂಲಗಳನ್ನು (Sources) ಒದಗಿಸುವುದು ಇದರ ವಿಶೇಷತೆಯಾಗಿದೆ. ಅರವಿಂದ್ ಶ್ರೀನಿವಾಸ್ ಎಂಬ ಭಾರತೀಯ ಮೂಲದ ಉದ್ಯಮಿ ಈ ಕಂಪನಿಯ ಸಿಇಒ ಆಗಿರುವುದು ವಿಶೇಷ.

    ರೊನಾಲ್ಡೊ ಅವರ ಪಾತ್ರವೇನು?
    ಕೇವಲ ಹೂಡಿಕೆದಾರರಾಗಿ ಮಾತ್ರವಲ್ಲದೆ, ರೊನಾಲ್ಡೊ ಅವರು ಪರ್ಪ್ಲೆಕ್ಸಿಟಿ ಎಐನ ಜಾಗತಿಕ “ಬ್ರಾಂಡ್ ಅಂಬಾಸಿಡರ್” (Brand Ambassador) ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ಒಪ್ಪಂದದ ಭಾಗವಾಗಿ, ಪರ್ಪ್ಲೆಕ್ಸಿಟಿ ಎಐ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ “ರೊನಾಲ್ಡೊ ಹಬ್” (Ronaldo Hub) ಎಂಬ ವಿಶೇಷ ವಿಭಾಗವನ್ನು ಪರಿಚಯಿಸಿದೆ. ಇಲ್ಲಿ ಅಭಿಮಾನಿಗಳು ರೊನಾಲ್ಡೊ ಅವರ ವೃತ್ತಿಜೀವನದ ಮೈಲಿಗಲ್ಲುಗಳು, ಅಂಕಿಅಂಶಗಳು ಮತ್ತು ಸಾಧನೆಗಳ ಬಗ್ಗೆ ಎಐ ಮೂಲಕ ನಿಖರ ಮಾಹಿತಿ ಪಡೆಯಬಹುದು.

    ಫುಟ್ಬಾಲ್ ಮೈದಾನದ ಹೊರಗೆ ರೊನಾಲ್ಡೊ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಅವರ ಪ್ರಮುಖ ಹೂಡಿಕೆಗಳು ಈ ಕೆಳಗಿನಂತಿವೆ:
    ಪೆಸ್ಟಾನಾ CR7 ಹೋಟೆಲ್ಸ್ (Pestana CR7 Hotels) ಮಾಲೀಕತ್ವ ಹೊಂದಿದ್ದ ರೊನಾಲ್ಡೋ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಐಷಾರಾಮಿ ಹೋಟೆಲ್ ಸರಪಳಿಯನ್ನು ಹೊಂದಿದ್ದಾರೆ. ‘CR7’ ಬ್ರಾಂಡ್ ಅಡಿಯಲ್ಲಿ ಒಳ ಉಡುಪು, ಸುಗಂಧ ದ್ರವ್ಯ (Perfumes) ಮತ್ತು ಕನ್ನಡಕಗಳನ್ನು ಮಾರಾಟ ಮಾಡುತ್ತಾರೆ. ‘CR7 ಕ್ರಂಚ್ ಫಿಟ್‌ನೆಸ್’ ಜಿಮ್‌ಗಳು ಮತ್ತು ಕೂದಲು ಕಸಿ ಚಿಕಿತ್ಸಾಲಯಗಳಲ್ಲಿ (Insparya Hair Clinic) ಹೂಡಿಕೆ ಮಾಡಿದ್ದಾರೆ. ಈಗ ಪರ್ಪ್ಲೆಕ್ಸಿಟಿ Ai ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೂ ವಿಸ್ತರಿಸಿದ್ದಾರೆ.

    ಒಂದು ಐತಿಹಾಸಿಕ ವೃತ್ತಿಜೀವನ ಪೋರ್ಚುಗಲ್‌ನ ಪುಟ್ಟ ದ್ವೀಪದಲ್ಲಿ ಜನಿಸಿದ ರೊನಾಲ್ಡೊ, ತಮ್ಮ ಕಠಿಣ ಪರಿಶ್ರಮದಿಂದಲೇ ವಿಶ್ವದ ಉತ್ತುಂಗಕ್ಕೇರಿದವರು. ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಮತ್ತು ಅಲ್-ನಸರ್ ನಂತಹ ಕ್ಲಬ್‌ಗಳ ಪರ ಆಡಿರುವ ಇವರು, 5 ಬಾರಿ ಪ್ರತಿಷ್ಠಿತ ‘ಬ್ಯಾಲನ್ ಡಿ’ಓರ್’ (Ballon d’Or) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಂತರರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲುಗಳಿಸಿದ ದಾಖಲೆ ಇವರ ಹೆಸರಲ್ಲಿದೆ.

    ಇದನ್ನೂ ಓದಿ: ಗೂಗಲ್ ಜೆಮಿನಿ ಅಬ್ಬರಕ್ಕೆ ‘ಕೋಡ್ ರೆಡ್’ ಘೋಷಿಸಿದ OpenAI; ಏನಿದು ‘ಕೋಡ್ ರೆಡ್’?

    ಸ್ಪರ್ಧಾತ್ಮಕ Ai ಮಾರುಕಟ್ಟೆ:
    ಗೂಗಲ್ ಜೆಮಿನಿ (Gemini), ಓಪನ್ Ai ನ ಚಾಟ್‌ಜಿಪಿಟಿ (ChatGPT) ಮತ್ತು ಮೈಕ್ರೋಸಾಫ್ಟ್ ಕೊಪೈಲಟ್ (Copilot) ನಂತಹ ದಿಗ್ಗಜಗಳಿರುವ ಎಐ ಕ್ಷೇತ್ರದಲ್ಲಿ, ಪರ್ಪ್ಲೆಕ್ಸಿಟಿ Ai ತನ್ನ ನಿಖರತೆ ಮತ್ತು ವಿಶ್ವಾಸಾರ್ಹತೆಯ ಮೂಲಕ ಗಮನ ಸೆಳೆಯುತ್ತಿದೆ. ಈಗ ರೊನಾಲ್ಡೊ ಅವರಂತಹ ಜಾಗತಿಕ ಐಕಾನ್ ಜೊತೆಗೂಡಿರುವುದರಿಂದ, ಈ ಕಂಪನಿಯು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವ ನಿರೀಕ್ಷೆಯಿದೆ.

    “ಗೆಲ್ಲುವುದನ್ನು ಎಂದಿಗೂ ನಿಲ್ಲಿಸಬೇಡಿ” ಎಂಬುದು ರೊನಾಲ್ಡೊ ಅವರ ತತ್ವ. ಫುಟ್ಬಾಲ್ ಮೈದಾನದಲ್ಲಿ ಗೆದ್ದ ಅವರು, ಈಗ ಭವಿಷ್ಯದ ತಂತ್ರಜ್ಞಾನವಾದ ಎಐನಲ್ಲೂ ಗೆಲುವಿನ ಕುದುರೆ ಏರಲು ಹೊರಟಿದ್ದಾರೆ. ಅವರ ಈ ನಡೆ ಕ್ರೀಡಾಪಟುಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಹೊಸ ಪ್ರೇರಣೆಯಾಗಿದೆ.

    Curiosity is a requirement for greatness. You win when you keep asking new questions every day. That’s why I am proud to announce my investment in Perplexity.

    Perplexity is powering the world’s curiosity, and together we will inspire everyone to ask more ambitious questions.… pic.twitter.com/gyBgQ3r8yh

    — Cristiano Ronaldo (@Cristiano) December 4, 2025
    Ai News in kannada Cristiano Ronaldo CR‍7 Google Gemini Open Ai ChatGPT Perplexity Ai tech news in kannada tech updates in kannada ಕೃತಕ ಬುದ್ಧಿಮತ್ತೆ ನ್ಯೂಸ್‌ ಕೃತಕ ಬುದ್ಧಿಮತ್ತೆ ಸುದ್ದಿಗಳು
    Share. Facebook Twitter WhatsApp LinkedIn Email
    Previous Articleಗೂಗಲ್ ಜೆಮಿನಿ ಅಬ್ಬರಕ್ಕೆ ‘ಕೋಡ್ ರೆಡ್’ ಘೋಷಿಸಿದ OpenAI; ಏನಿದು ‘ಕೋಡ್ ರೆಡ್’?
    Next Article ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ದಾಖಲೆ: 11 ತಿಂಗಳಲ್ಲಿ 11.8 ಲಕ್ಷ ವಾಹನಗಳ ನೋಂದಣಿ!

    Related Posts

    Tech

    Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

    August 20, 2026
    Tech

    ಯೂಟ್ಯೂಬ್ ವ್ಲಾಗಿಂಗ್ ಶುರು ಮಾಡ್ತಿದ್ದೀರಾ? ಹಾಗಾದ್ರೆ ಈ ಟಾಪ್ 5 ಕ್ಯಾಮರಾ ಫೋನ್‌ಗಳನ್ನೊಮ್ಮೆ ನೋಡಿ!

    June 21, 2026
    Tech

    ಪದೇ ಪದೇ ಚಾರ್ಜ್ ಮಾಡಿ ಸಾಕಾಗಿದ್ಯಾ? ಮೊಬೈಲ್ ಬ್ಯಾಟರಿ ಉಳಿಸಲು ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿ!

    April 23, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Our Picks

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.