ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ತನ್ನ ಬಹುನಿರೀಕ್ಷಿತ ಪ್ರೀಮಿಯಂ ಎಲೆಕ್ಟ್ರಿಕ್ ಕಾರ್ ಬ್ರಾಂಡ್ ಆದ ‘ಅವಿನ್ಯಾ’ (Avinya) ಸರಣಿಯ ಬಗ್ಗೆ ಮಹತ್ವದ ಸುಳಿವು ನೀಡಿದೆ. ಟಾಟಾ ಸಂಸ್ಥೆಯು ಜಾಗತಿಕ ಮಟ್ಟದ ಐಷಾರಾಮಿ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ.
ಜಾಗ್ವಾರ್ ತಂತ್ರಜ್ಞಾನದ ಬಲ ಟಾಟಾ ಮೋಟಾರ್ಸ್ ತನ್ನ ಮುಂಬರುವ ‘ಅವಿನ್ಯಾ’ ಸರಣಿಯ ಕಾರುಗಳಿಗಾಗಿ ಜಾಗ್ವಾರ್ ಲ್ಯಾಂಡ್ ರೋವರ್ (JLR) ಸಂಸ್ಥೆಯ ಎಲೆಕ್ಟ್ರಿಫೈಡ್ ಮಾಡ್ಯುಲರ್ ಆರ್ಕಿಟೆಕ್ಚರ್ (EMA) ಪ್ಲಾಟ್‌ಫಾರ್ಮ್ ಅನ್ನು ಬಳಸಲಿದೆ ಎಂಬ ವರದಿಗಳು ಹೊರಬಿದ್ದಿವೆ. ಇದರಿಂದಾಗಿ ಟಾಟಾ ಕಾರುಗಳು ಜಾಗ್ವಾರ್ ಮತ್ತು ರೇಂಜ್ ರೋವರ್ ಕಾರುಗಳಷ್ಟೇ ಪ್ರೀಮಿಯಂ ಗುಣಮಟ್ಟ ಮತ್ತು ತಂತ್ರಜ್ಞಾನವನ್ನು ಹೊಂದಿರಲಿವೆ.
‘ಅವಿನ್ಯಾ’ ವಿಶೇಷತೆಗಳೇನು?
ಅತ್ಯಾಧುನಿಕ ವಿನ್ಯಾಸ: ಅವಿನ್ಯಾ ಕಾರುಗಳು ಸಾಂಪ್ರದಾಯಿಕ ಎಸ್‌ಯುವಿ ಗಳಿಗಿಂತ ಭಿನ್ನವಾಗಿದ್ದು, ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಶೈಲಿಯ ಮಿಶ್ರಣವಾದ ‘ಸ್ಪೋರ್ಟ್ಸ್‌ಬ್ಯಾಕ್’ ವಿನ್ಯಾಸವನ್ನು ಹೊಂದುವ ಸಾಧ್ಯತೆಯಿದೆ.
ವಿಶಾಲವಾದ ಒಳಾಂಗಣ: ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಬಳಸಿರುವುದರಿಂದ, ಕಾರಿನ ಒಳಗೆ ಪ್ರಯಾಣಿಕರಿಗೆ ಅತಿ ಹೆಚ್ಚು ಜಾಗ (Legroom) ಸಿಗಲಿದೆ.
ರೇಂಜ್ ಮತ್ತು ಚಾರ್ಜಿಂಗ್: ಈ ಕಾರುಗಳು ಕನಿಷ್ಠ 500 ಕಿ.ಮೀ ಗಿಂತಲೂ ಹೆಚ್ಚು ರೇಂಜ್ ನೀಡಲಿದ್ದು, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿವೆ.
ಟಾಟಾ ‘ಅವಿನ್ಯಾ’ ಕಾರುಗಳಿಗೆ ಪ್ರತ್ಯೇಕ ಶೋರೂಮ್: ಸಾಮಾನ್ಯ ಟಾಟಾ ಶೋರೂಮ್‌ಗಳಲ್ಲಿ ಇವು ಸಿಗುವುದಿಲ್ಲ!
ಟಾಟಾ ಮೋಟಾರ್ಸ್ ತನ್ನ ಮುಂಬರುವ ಐಷಾರಾಮಿ ಎಲೆಕ್ಟ್ರಿಕ್ ಕಾರ್ ಬ್ರಾಂಡ್ ಆದ ‘ಅವಿನ್ಯಾ’ ಮಾರಾಟಕ್ಕಾಗಿ ಹೊಸ ತಂತ್ರವೊಂದನ್ನು ರೂಪಿಸಿದೆ. ಮಾರುತಿ ಸುಜುಕಿ ಕಂಪನಿಯು ‘ನೆಕ್ಸಾ’ ಶೋರೂಮ್‌ಗಳನ್ನು ಹೊಂದಿರುವಂತೆ, ಟಾಟಾ ಕೂಡ ‘ಅವಿನ್ಯಾ’ ಸರಣಿಯ ಕಾರುಗಳಿಗಾಗಿ ಪ್ರತ್ಯೇಕ ಮತ್ತು ಐಷಾರಾಮಿ ಶೋರೂಮ್‌ಗಳನ್ನು ತೆರೆಯಲಿದೆ.
ಏಕೀ ಪ್ರತ್ಯೇಕ ಶೋರೂಮ್?: ಟಾಟಾ ಸಂಸ್ಥೆಯ ಪ್ರಕಾರ, ‘ಅವಿನ್ಯಾ’ ಕೇವಲ ಒಂದು ಕಾರಲ್ಲ, ಅದೊಂದು ಪ್ರೀಮಿಯಂ ಬ್ರಾಂಡ್. ಈ ಕಾರುಗಳ ಬೆಲೆ ಮತ್ತು ಗುಣಮಟ್ಟವು ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಮತ್ತು ಆಡಿ ಕಾರುಗಳಿಗೆ ಪೈಪೋಟಿ ನೀಡುವಂತಿರಲಿದೆ. ಹೀಗಾಗಿ, ಗ್ರಾಹರಿಗೆ ವಿಶ್ವದರ್ಜೆಯ ಖರೀದಿ ಅನುಭವ ನೀಡಲು ಟಾಟಾ ಮೋಟಾರ್ಸ್ ಸಾಮಾನ್ಯ ಶೋರೂಮ್‌ಗಳ ಬದಲಿಗೆ ಎಕ್ಸ್‌ಕ್ಲೂಸಿವ್ ಔಟ್‌ಲೆಟ್‌ಗಳನ್ನು ಸ್ಥಾಪಿಸುತ್ತಿದೆ.
‘ಫಿಜಿಟಲ್’ (Phygital) ಮಾದರಿ ಎಂದರೇನು?
ಟಾಟಾ ಸಂಸ್ಥೆಯು ‘ಅವಿನ್ಯಾ’ ಮಾರಾಟಕ್ಕಾಗಿ ‘ಫಿಜಿಟಲ್’ (ಭೌತಿಕ + ಡಿಜಿಟಲ್) ಮಾದರಿಯನ್ನು ಅಳವಡಿಸಿಕೊಳ್ಳಲಿದೆ:
ಪ್ರೀಮಿಯಂ ಲೊಕೇಶನ್: ಈ ಶೋರೂಮ್‌ಗಳು ಕೇವಲ ಪ್ರಮುಖ ನಗರಗಳ (ಬೆಂಗಳೂರು, ಮುಂಬೈ, ದೆಹಲಿ) ಹೈ-ಫೈ ಏರಿಯಾಗಳಲ್ಲಿ ಮಾತ್ರ ಇರಲಿವೆ.
ಡಿಜಿಟಲ್ ಅನುಭವ: ಗ್ರಾಹಕರು ಶೋರೂಮ್‌ಗೆ ಬರುವ ಮೊದಲೇ ವರ್ಚುವಲ್ ರಿಯಾಲಿಟಿ (VR) ಮೂಲಕ ಕಾರಿನ ಒಳಾಂಗಣ ಮತ್ತು ಟೆಸ್ಟ್ ಡ್ರೈವ್ ಅನುಭವ ಪಡೆಯಬಹುದು.
ಲಾಂಜ್ ಅನುಭವ: ಇಲ್ಲಿ ಕಾರು ಮಾರಾಟಕ್ಕಿಂತ ಹೆಚ್ಚಾಗಿ ಗ್ರಾಹಕರ ಆರಾಮದಾಯಕ ಅನುಭವಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.
2026ರ ಆರಂಭದಲ್ಲಿ ಈ ಕಾರುಗಳು ರಸ್ತೆಗಿಳಿಯುವ ನಿರೀಕ್ಷೆಯಿದ್ದು, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ.
