Close Menu
New Karnataka
    What's Hot

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

      July 15, 2026

      ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

      July 14, 2026

      ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

      July 14, 2026

      ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

      July 13, 2026

      KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!

      July 13, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » RCB vs SRH: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ – ಕೊಹ್ಲಿ, ಪಡಿಕ್ಕಲ್ ಅಬ್ಬರ!
    cricket

    RCB vs SRH: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ – ಕೊಹ್ಲಿ, ಪಡಿಕ್ಕಲ್ ಅಬ್ಬರ!

    New KarnatakaBy New KarnatakaMarch 29, 2026Updated:March 30, 20262 Mins Read
    Share WhatsApp Facebook Twitter LinkedIn Telegram Email
    IPL 2026 RCB Vs SRH
    Share
    WhatsApp Facebook Twitter LinkedIn Email

    Match 01 | RCB vs SRH | 28-03-2026

    ಹತ್ತೋಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಶನಿವಾರ ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಶುಭಾರಂಭ ಮಾಡಿದೆ.

    ​ಸನ್‌ರೈಸರ್ಸ್ ಹೋರಾಟ:

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತು. ಆರ್‌ಸಿಬಿ ಪರ ಪದಾರ್ಪಣೆ ಮಾಡಿದ ವೇಗಿ ಜಾಕೋಬ್ ಡಫಿ (3/22) ಅವರ ಮಾರಕ ದಾಳಿಗೆ ಸಿಲುಕಿ ಹೈದರಾಬಾದ್ ಕೇವಲ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ನಾಯಕನ ಜವಾಬ್ದಾರಿ ಹೊತ್ತ ಇಶಾನ್ ಕಿಶನ್ ಕೇವಲ 38 ಎಸೆತಗಳಲ್ಲಿ 80 ರನ್ ಬಾರಿಸಿ ತಂಡ ಚೇತರಿಸಿಕೊಳ್ಳುವಂತೆ ಮಾಡಿದರು. ಕೊನೆಯಲ್ಲಿ ಅನಿ ಕೇತ್ ವರ್ಮಾ (18 ಎಸೆತಗಳಲ್ಲಿ 43 ರನ್) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.

    RCB ಸುಲಭ ಜಯ:

    202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡವು ಎಲ್ಲಿಯೂ ಒತ್ತಡಕ್ಕೆ ಸಿಲುಕಲಿಲ್ಲ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಬೇಗನೆ ನಿರ್ಗಮಿಸಿದರೂ, ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಜೋಡಿ ಹೈದರಾಬಾದ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕರ್ನಾಟಕದ ಹುಡುಗ ಪಡಿಕ್ಕಲ್ ಕೇವಲ 26 ಎಸೆತಗಳಲ್ಲಿ 61 ರನ್ ಸಿಡಿಸಿ ಮಿಂಚಿದರು.

    ​ಮತ್ತೊಂದೆಡೆ ‘ಚೇಸ್ ಮಾಸ್ಟರ್’ ವಿರಾಟ್ ಕೊಹ್ಲಿ ಅಜೇಯ 69 ರನ್ (38 ಎಸೆತ, 5 ಬೌಂಡರಿ, 5 ಸಿಕ್ಸರ್) ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕ ರಜತ್ ಪಾಟಿದಾರ್ ಕೂಡ ಕೇವಲ 12 ಎಸೆತಗಳಲ್ಲಿ 31 ರನ್ ಗಳಿಸಿ ತಂಡದ ರನ್ ವೇಗ ಹೆಚ್ಚಿಸಿದರು. ಅಂತಿಮವಾಗಿ ಆರ್‌ಸಿಬಿ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 15.4 ಓವರ್‌ಗಳಲ್ಲಿ 203 ರನ್ ಗಳಿಸಿ ವಿಜಯ ಪತಾಕೆ ಹಾರಿಸಿತು.

    ಇದನ್ನೂ ಓದಿ: CSK ಅಭಿಮಾನಿಗಳಿಗೆ ಬಿಗ್ ಶಾಕ್: ಐಪಿಎಲ್ 2026ರ ಆರಂಭಿಕ ಪಂದ್ಯಗಳಿಂದ MS ಧೋನಿ ಔಟ್!

    ​ಪಂದ್ಯದ ಮುಖ್ಯಾಂಶಗಳು:

    • ​ವಿರಾಟ್ ಕೊಹ್ಲಿ: 69* (38 ಎಸೆತ)
    • ​ದೇವದತ್ ಪಡಿಕ್ಕಲ್: 61 (26 ಎಸೆತ)
    • ​ಜಾಕೋಬ್ ಡಫಿ: 3 ವಿಕೆಟ್ (ಪಂದ್ಯ ಶ್ರೇಷ್ಠ)
    • ​ಇಶಾನ್ ಕಿಶನ್: 80 (38 ಎಸೆತ)

    ​ಬೆಂಗಳೂರಿನ ಅಭಿಮಾನಿಗಳ ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆಯ ನಡುವೆ ಆರ್‌ಸಿಬಿ ಈ ಸೀಸನ್ ಅನ್ನು ಅತ್ಯಂತ ಆತ್ಮವಿಶ್ವಾಸದಿಂದ ಆರಂಭಿಸಿದೆ.

    cricket ipl 2026 news in kannada rcb Royal Challengers bengaluru SRH Tata IPL 2026 trending news virat kohli
    Share. Facebook Twitter WhatsApp LinkedIn Email
    Previous Articleಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ರೂ. ಭಾರಿ ಸಬ್ಸಿಡಿ!
    Next Article 50-30-20 ನಿಯಮ: ದುಡಿದ ಹಣದಲ್ಲಿ ಉಳಿತಾಯವನ್ನು ಆಟೊಮೇಟ್ ಮಾಡುವುದು ಹೇಗೆ?

    Related Posts

    cricket

    ಇಂಗ್ಲೆಂಡ್ ದಿಗ್ಗಜ ಬೆನ್ ಸ್ಟೋಕ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ: ಇಲ್ಲಿದೆ ‘ಬಾಜ್‌ಬಾಲ್’ ರೂವಾರಿಯ ಸಂಪೂರ್ಣ ವಿವರ

    June 29, 2026
    cricket

    ರಜತ್ ಪಾಟಿದಾರ್‌ಗೆ ಅನ್ಯಾಯ: ಟೀಮ್ ಇಂಡಿಯಾ ಆಯ್ಕೆ ವಿರುದ್ಧ ಹರ್ಭಜನ್ ಸಿಂಗ್ ಬೇಸರ

    June 6, 2026
    cricket

    IPL 2027: ನೀತಿ ಸಂಹಿತೆ ಉಲ್ಲಂಘಿಸಿದ ಟಿಮ್ ಡೇವಿಡ್ ಮೊದಲ ಪಂದ್ಯದಿಂದ ಅಮಾನತು

    June 2, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Our Picks

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.