ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ ನಿರ್ಮಾಣದ ಬಹುಕೋಟಿ ವೆಚ್ಚದ ಕಾಂತಾರ ಅದ್ಯಾಯ 1 ಜಗತ್ತಿನಾದ್ಯಂತ ಬಿಡುಗಡೆಯಾಗಿದೆ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಚಿತ್ರಕ್ಕೆ ಸೋಷಿಯಲ್ ಮಿಡಿಯಾಗಳಲ್ಲಿ ಪ್ರಶಂಸೆಗಳ ಸುರಿಮಳೆ ಹರಿದು ಬಂದಿದೆ,
ಪ್ರಿಮಿಯರ್ ಶೋ ದಿಂದಲೇ ಕಾಂತಾರ ಕ್ರೇಜ್ ಶುರು
ಚಿತ್ರ ನಿರ್ಮಾಣ ಸಂಸ್ಥೆ ಬಿಡುಗಡೆಯ ಹಿಂದಿನ ದಿನದ ರಾತ್ರಿಯೇ ಹಲವೆಡೆ ಅಭಿಮಾನಿಗಳಿಗಾಗಿ ವಿಶೇಷ ಪ್ರಿಮಿಯರ್ ಶೋ ಹಮ್ಮಿಕೊಂಡಿತ್ತು. ಅಭಿಮಾನಿಗಳು ಮತ್ತು ಚಿತ್ರತಂಡದೊಂದಿಗೆ ವಿಕ್ಷಿಸಿದ ರಿಷಭ್ ಶೆಟ್ಟಿ, ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಭಾವುಕರಾದರು, ಮತ್ತು ಚಿತ್ರಕ್ಕೆ ಶ್ರಮಿಸಿದ ಚಿತ್ರತಂಡಕ್ಕೆ ಧನ್ಯವಾದವನ್ನು ಅರ್ಪಿಸಿದರು.
ಚಿತ್ರದ ಮೊದಲ ಅರ್ಧದ ಭಾಗವೇ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ ಎಂದು ಫ್ಯಾನ್ಸ್‌ಗಳು ಹೇಳುತ್ತಿದ್ದಾರೆ. ಚಿತ್ರದ ದೃಶ್ಯಗಳು, ಬ್ಯಾಕ್‌ಗ್ರೌಂಡ್ ಸಂಗೀತ ಮತ್ತು ವಿಶುವಲ್ ಇಫೆಕ್ಟ್ ಹಾಲಿವುಡ್ ಮಟ್ಟದಲ್ಲಿವೆ ಎಂದು ಅನೇಕರು ಪ್ರಶಂಸಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳು ಮತ್ತು ಇಂಟರ್ವೆಲ್ ಬ್ಲಾಕ್‌ನ ದೃಶ್ಯಗಳು ಗೂಸ್‌ಬಂಪ್ಸ್ ಅನುಭವವನ್ನು ನೀಡಿದೆ ಎಂದು ಹಲವರು ಹೊಗಳಿದ್ದಾರೆ.
ಕರ್ನಾಟಕದ ತುಳುನಾಡಿನ ಹಿನ್ನೆಲೆಯಲ್ಲಿ ರೂಪುಗೊಂಡ ಈ ಚಿತ್ರ, ಪೌರಾಣಿಕ ಕಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆದು, ಪ್ರೇಕ್ಷಕರನ್ನು ರಂಜಿಸಿದೆ. ಒಟ್ಟಿನಲ್ಲಿ ಚಿತ್ರವು ಮೊದಲ ದಿನದಿಂದಲೇ ಫ್ಯಾನ್ಸ್‌ಗಳ ಹೃದಯವನ್ನು ಗೆದ್ದಿದ್ದು, ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.