Close Menu
New Karnataka
    What's Hot

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

      August 30, 2026

      ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

      August 29, 2026

      ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

      August 26, 2026

      ಎಂದೂ ಕುಗ್ಗದ ಬಿಸಿನೆಸ್‌: ಮಹಿಳೆಯರಿಗೆ ಹೆಚ್ಚು ಲಾಭ ತರುವ ‘ಟೈಲರಿಂಗ್ ಉದ್ಯಮ’

      August 23, 2026

      Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

      August 20, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » 2025 ರ ಮಲಯಾಳಂ ಬ್ಲಾಕ್‌ಬಸ್ಟರ್ ಲೋಕ-ಚಾಪ್ಟರ್‌ 1 ಓಟಿಟಿಗೆ; ಕನ್ನಡದಲ್ಲೇ ವಿಕ್ಷಿಸಿ.
    Entertainment

    2025 ರ ಮಲಯಾಳಂ ಬ್ಲಾಕ್‌ಬಸ್ಟರ್ ಲೋಕ-ಚಾಪ್ಟರ್‌ 1 ಓಟಿಟಿಗೆ; ಕನ್ನಡದಲ್ಲೇ ವಿಕ್ಷಿಸಿ.

    New KarnatakaBy New KarnatakaOctober 29, 2025Updated:October 30, 20252 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    2025 ರ ಅತೀ ಹೆಚ್ಚು ಗಳಿಕೆ ಮಾಡಿರುವ ಮಲಯಾಳಂ ಚಿತ್ರ, ಮಲಯಾಳಂ ಸಿನಿಮಾ ಜಗತ್ತಿನಲ್ಲಿ ಒಂದು ಹೊಸ ಅಧ್ಯಾಯ ಬರೆದಿರುವ ‘ಲೋಕಃ ಚಾಪ್ಟರ್ 1: ಚಂದ್ರ’ ಸಿನಿಮಾ ಅದರ ಒಟಿಟಿ ಬಿಡುಗಡೆಗೆ ಸಂಪೂರ್ಣ ಸಿದ್ಧವಾಗಿದೆ. ಈ ಫ್ಯಾಂಟಸಿ-ಆಕ್ಷನ್ ಬ್ಲಾಕ್‌ಬಸ್ಟರ್ ಸಿನಿಮಾ ಅಕ್ಟೋಬರ್ 31, 2025ರಂದು ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಈ ಸೂಪರ್ ಹೀರೋ ಕಥೆ, ಮಹಿಳಾ ಮುಖ್ಯ ಪಾತ್ರದೊಂದಿಗೆ ದಾಖಲೆಯ ಗಳಿಕೆ ಮಾಡಿದ್ದು, ಕನ್ನಡ ವಿಕ್ಷಕರಿಗೂ ಈಗ ಲಭ್ಯವಾಗುತ್ತಿದೆ.

    ಸಿನಿಮಾ ‘ಲೋಕಃ ಚಾಪ್ಟರ್ 1: ಚಂದ್ರ’ ಒಂದು ರಹಸ್ಯಮಯ ಯುವತಿಯ ಕಥೆಯನ್ನು ಹೊಂದಿದ್ದು, ಅವಳು ಸಾಮಾನ್ಯ ಜೀವನದಿಂದ ಹೊರಬಂದು ಸೂಪರ್ ಹೀರೋ ಆಗಿ ಬದಲಾಗುತ್ತಾಳೆ. ಚಂದ್ರ ಎಂಬ ಪಾತ್ರದ ಮೂಲಕ ಕಲ್ಯಾಣಿ ಪ್ರಿಯದರ್ಶನ್ ತನ್ನ ಅಭಿನಯದ ಚಾತುರ್ಯವನ್ನು ತೋರಿಸಿದ್ದಾರೆ. ಡೊಮಿನಿಕ್ ಅರುನ್ ನಿರ್ದೇಶನದಲ್ಲಿ ರೂಪುಗೊಂಡ ಈ ಸಿನಿಮಾ, ಫ್ಯಾಂಟಸಿ ಲೋಕದೊಂದಿಗೆ ಆಧುನಿಕ ಸಮಸ್ಯೆಗಳನ್ನು ಮಿಶ್ರಗೊಳಿಸಿ ತೀವ್ರ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಸ್ಪಾಯಿಲರ್ ಇಲ್ಲದೆ ಹೇಳುವುದಾದರೆ, ಇದು ಒಂದು ಮಹಿಳಾ ಶಕ್ತಿ ಕೇಂದ್ರಿಕೃತ ಕಥೆಯಾಗಿದ್ದು, ಚಿತ್ರದ ವಿಶುವಲ್ಸ್‌ಗೂ ದೊಡ್ಡ ಮೆಚ್ಚುಗೆ ಸಿಕ್ಕಿದೆ.

    The world of Lokah unfolds exclusively on JioHotstar, streaming from October 31st.@DQsWayfarerFilm @dulQuer @kalyanipriyan @naslen__ @NimishRavi @SanthyBee#LokahOnJioHotstar #LokahUniverse #YakshiReturns #LokahChapter1 #Wayfarerfilms #DulquerSalmaan #DominicArun… pic.twitter.com/Va3c6PGttC

    — JioHotstar Malayalam (@JioHotstarMal) October 24, 2025

    ಸಿನಿಮಾದ ಬಿಡುಗಡೆಯಾದಾಗಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದು, ಈಗ ಒಟಿಟಿಯಲ್ಲಿ ಬಿಡುಗಡೆಯಾಗುವುದರಿಂದ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ವಿಕ್ಷಕರು ಆನಂದಿಸಬಹುದು. ಮಲಯಾಳಂ, ತಮಿಳು, ಹಿಂದಿ, ತೆಲುಗು, ಕನ್ನಡ, ಬಂಗಾಳಿ ಸೇರಿದಂತೆ ಆರು ಭಾಷೆಗಳಲ್ಲಿ ಡಬ್ಬಿಂಗ್ ಆಗಿರುವುದು ಇದರ ವಿಶೇಷತೆಯಾಗಿದೆ.

    ಸ್ಟಾರ್‌ ಕಾಸ್ಟ್
    ಕಲ್ಯಾಣಿ ಪ್ರಿಯದರ್ಶನ್ ಚಂದ್ರ ಪಾತ್ರದಲ್ಲಿ ಮಿನುಗುತ್ತಾರೆ ಎಂದರೆ, ನಾಸ್ಲೆನ್ ಕೆ. ಗಫೂರ್ ಅವರೊಂದಿಗಿನ ಕೆಮಿಸ್ಟ್ರಿ ಸಿನಿಮಾಕ್ಕೆ ಹೊಸ ಆಯಾಮ ನೀಡಿದೆ. ಡುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ, ಯುವ ನಿರ್ದೇಶಕ ಡೊಮಿನಿಕ್ ಅರುನ್ ಅವರ ಮೊದಲ ಬೆಳ್ಳಿ ತೆರೆಗೆ ಒಂದು ದೊಡ್ಡ ಗೆಲುವು. ಇನ್ನೂ ಪ್ರಮುಖ ಪಾತ್ರಗಳಲ್ಲಿ ಸಂಪತ್ ಮಂಗಳಂ, ಗುರುಪ್ರಸಾದ್ ಮತ್ತು ಹಲವು ಹೊಸ ಮುಖಗಳು ಇದ್ದು, ಅವರ ಅಭಿನಯ ಸಿನಿಮಾವನ್ನು ಇನ್ನೂ ಹೆಚ್ಚು ಆಕರ್ಷಕಗೊಳಿಸಿದೆ.
    ಸಂಗೀತ ನಿರ್ದೇಶಕ ಜ್ಯೋತಿಷ್ ಶಂಕರ್ ಅವರ ಸಂಗೀತ ಟ್ರ್ಯಾಕ್‌ಗಳು, ವಿಶೇಷವಾಗಿ ಬ್ಯಾಕ್‌ಗ್ರೌಂಡ್ ಸ್ಕೋರ್, ದೃಶ್ಯಗಳನ್ನು ಹೆಚ್ಚು ವಿಜೃಂಬಿಸಿದ್ದು, ಸಿನಿಮಾದ ಒಟಿಟಿ ಅನುಭವವನ್ನು ಅದ್ಭುತಗೊಳಿಸುತ್ತದೆ.

    ಒಟಿಟಿ ಬಿಡುಗಡೆ: ಜಿಯೋಹಾಟ್‌ಸ್ಟಾರ್‌ನಲ್ಲಿ ಅಕ್ಟೋಬರ್ 31
    ಈ ವಾರದ ಒಟಿಟಿ ಬಿಡುಗಡೆಗಳಲ್ಲಿ ‘ಲೋಕಃ ಚಾಪ್ಟರ್ 1: ಚಂದ್ರ’ ಒಂದು ಮುಖ್ಯ ಆಕರ್ಷಣೆಯಾಗಿದೆ. ಅದೇ ದಿನದಲ್ಲಿ ‘ಕಾಂತಾರ: ಚಾಪ್ಟರ್ 1’ ಸಹ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗುತ್ತಿದ್ದು, ಒಟಿಟಿ ವಿಕ್ಷಕರಿಗೆ ಡಬಲ್‌ ಧಮಾಕಾವಾಗಿದೆ. ಜಿಯೋಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್ ಹೊಂದಿರುವ ವಿಕ್ಷಕರು, ಸಿನಿಮಾ ಪ್ರಿಯರಿಗೆ ಈ ಸೂಪರ್ ಹೀರೋ ಸಾಹಸವನ್ನು 2 ಗಂಟೆ 31 ನಿಮಿಷಗಳ ಕಾಲ ಆನಂದಿಸಬಹುದು.

    ಇದನ್ನೂ ಒದಿ: ಅಂದುಕೊಂಡದ್ದಕ್ಕಿಂತ ಮೊದಲೇ ಕಾಂತಾರ ಚಾಪ್ಟರ್‌ 1 OTTಗೆ; ಬಿಡುಗಡೆಗೆ ಡೇಟ್‌ ಫಿಕ್ಷ್‌.

    ಏಕೆ ನೋಡಬೇಕು?
    ಮಲಯಾಳಂ ಸಿನಿಮಾ ಉದ್ಯಮದಲ್ಲಿ ಮಹಿಳಾ ನಾಯಕತ್ವದ ಚಿತ್ರಗಳು ಹೊಸ ಮುನ್ನೆಲೆಗೆ ಬರುತ್ತಿರುವ ಸಂದರ್ಭದಲ್ಲಿ, ‘ಲೋಕಃ’ ಒಂದು ಪ್ರೇರಣಾದಾಯಕ ಕಥೆಯಾಗಿದೆ. ಉತ್ತಮ ವಿಎಫ್‌ಎಕ್ಸ್, ಆಕ್ಷನ್ ಸೀಕ್ವೆನ್ಸ್‌ಗಳು ಮತ್ತು ಭಾವನಾತ್ಮಕ ಡೆಪ್ತ್‌ನೊಂದಿಗೆ ಇದು ಕುಟುಂಬದೊಂದಿಗೆ ನೋಡಲು ಸೂಕ್ತ. ಕನ್ನಡ ಡಬ್ಬಿಂಗ್‌ನಲ್ಲಿ ಬಿಡುಗಡೆಯಾಗುವುದರಿಂದ ಕನ್ನಡ ಸಿನಿ ವಿಕ್ಷಕರಿಗೆ ಇದು ಹೆಚ್ಚು ಸುಲಭವಾಗುತ್ತದೆ.

    ಅಕ್ಟೋಬರ್ 31ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಲಾಗಿನ್ ಆಗಿ ಈ ಬ್ಲಾಕ್‌ಬಸ್ಟರ್ ಅನ್ನು ಮಿಸ್ ಮಾಡಬೇಡಿ! ಮಲಯಾಳಂ ಸಿನಿಮಾದ ಹೊಸ ಎರಡು ಚಾಪ್ಟರ್‌ಗಳ ಸರಣಿಯ ಮೊದಲ ಭಾಗವಾಗಿ, ಸಿನಿಪ್ರೇಕ್ಷಕರನ್ನು ರಂಜಿಸಲಿದೆ.

    amazon prime video dulqer salman jio hotstar jio hotstar ott malayalam movie netflix ott releases ott upcoming movies upcoming movies on ott zee5
    Share. Facebook Twitter WhatsApp LinkedIn Email
    Previous Article29, ಅಕ್ಟೋಬರ್‌ 2025: ಇಂದಿನ ದಿನಭವಿಷ್ಯ- ರಾಶಿಫಲ, ಈ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯ, ಮೇಲಧಿಕಾರಿಗಳು ಮೆಚ್ಚುಗೆಯನ್ನು ನೀಡುತ್ತಾರೆ.
    Next Article 30, ಅಕ್ಟೋಬರ್‌ 2025: ಇಂದಿನ ದಿನಭವಿಷ್ಯ- ರಾಶಿಫಲ,ಗೋವುಗಳ ಪೂಜೆ ಮತ್ತು ದೇವಿಯ ಆರಾಧನೆಯಿಂದ ಶುಭ ಫಲಗಳು ದೊರೆಯುತ್ತವೆ

    Related Posts

    Entertainment

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026
    Entertainment

    Toxic Trailer: ಯಶ್ ‘ಟಾಕ್ಸಿಕ್’ ಟ್ರೈಲರ್ ರಿಲೀಸ್! ಫ್ಯಾನ್ಸ್ ಹೇಳಿದ್ದೇನು?

    August 9, 2026
    Entertainment

    ಹಾಲಿವುಡ್‌ಗೆ ಸೆಡ್ಡು ಹೊಡೆಯುವಂತಿದೆ ‘ರಾಮಾಯಣ’ ಟ್ರೈಲರ್: ರಾವಣನ ಲುಕ್ ನೋಡಿ ಫ್ಯಾನ್ಸ್ ಫಿದಾ!

    July 30, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Our Picks

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.