Close Menu
New Karnataka
    What's Hot

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

      August 30, 2026

      ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

      August 29, 2026

      ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

      August 26, 2026

      ಎಂದೂ ಕುಗ್ಗದ ಬಿಸಿನೆಸ್‌: ಮಹಿಳೆಯರಿಗೆ ಹೆಚ್ಚು ಲಾಭ ತರುವ ‘ಟೈಲರಿಂಗ್ ಉದ್ಯಮ’

      August 23, 2026

      Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

      August 20, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ರಾಜಮೌಳಿ ಮುಂದಿನ ಚಿತ್ರದ ಬಿಗ್ ಅಪ್‌ಡೇಟ್: ವಿಲನ್ ‘ಕುಂಭ’ನಾಗಿ ಪೃಥ್ವಿರಾಜ್ ಸುಕುಮಾರನ್ ಫಸ್ಟ್ ಲುಕ್ ರಿಲೀಸ್!
    Entertainment

    ರಾಜಮೌಳಿ ಮುಂದಿನ ಚಿತ್ರದ ಬಿಗ್ ಅಪ್‌ಡೇಟ್: ವಿಲನ್ ‘ಕುಂಭ’ನಾಗಿ ಪೃಥ್ವಿರಾಜ್ ಸುಕುಮಾರನ್ ಫಸ್ಟ್ ಲುಕ್ ರಿಲೀಸ್!

    New KarnatakaBy New KarnatakaNovember 7, 2025Updated:February 2, 20262 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ‘ಆರ್‌ಆರ್‌ಆರ್’ (RRR) ನಂತರ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆಗೆ ಕೈಜೋಡಿಸಿರುವ ಬಹುನಿರೀಕ್ಷಿತ ‘ಗ್ಲೋಬ್‌ಟ್ರೋಟರ್’ (Globetrotter) ಚಿತ್ರದ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಸದ್ಯಕ್ಕೆ ‘SSMB29’ ಎಂಬ ವರ್ಕಿಂಗ್ ಟೈಟಲ್‌ನೊಂದಿಗೆ ಗುರುತಿಸಿಕೊಂಡಿರುವ ಈ ಚಿತ್ರದಲ್ಲಿ (ತಾತ್ಕಾಲಿಕ ಹೆಸರು: ಗ್ಲೋಬ್‌ಟ್ರಾಟರ್) ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಪವರ್‌ಫುಲ್ ವಿಲನ್ ‘ಕುಂಭ’ನ ಪರಿಚಯ
    ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರತಂಡ, ಇದೀಗ ಪೃಥ್ವಿರಾಜ್ ಸುಕುಮಾರನ್ ಅವರ ಪಾತ್ರದ First Look ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಅವರು ‘ಕುಂಭ’ ಎಂಬ ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

    ಇದನ್ನೂ ಓದಿ: Apocalypto(2006); ಬೇಟೆಗಾರರೇ ಬೇಟೆಯಾದ ರೋಚಕ ಕಥೆಯುಳ್ಳ ಈ ಚಿತ್ರ ನೀವು ನೋಡಲೇಬೆಕು

    ಪೋಸ್ಟರ್‌ನಲ್ಲಿ, ನಟ ಪೃಥ್ವಿರಾಜ್ ಅವರು ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ವೀಲ್‌ಚೇರ್ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಅವರ ಎರಡು ಕಾಲುಗಳು ಮತ್ತು ಒಂದು ಕೈ ಸ್ವಾಧೀನವಿಲ್ಲದಂತೆ ಕಂಡುಬಂದರೂ, ವೀಲ್‌ಚೇರ್‌ಗೆ ಜೋಡಿಸಲಾದ ಯಾಂತ್ರಿಕ ತೋಳುಗಳು (Robotic Arms) ಅವರು ಬುದ್ಧಿವಂತ, ನಿರ್ದಯಿ ಮತ್ತು ತಾಂತ್ರಿಕವಾಗಿ ಪ್ರಬಲವಾದ ಪ್ರತಿಸ್ಪರ್ಧಿಯಾಗಿರಲಿದ್ದಾರೆ ಎಂಬುದನ್ನು ಸೂಚಿಸುತ್ತವೆ.

    ರಾಜಮೌಳಿ ಅವರು ತಮ್ಮ ಸೋಷಿಯಲ್‌ ಮಿಡಿಯಾ ಹ್ಯಾಂಡಲ್‌ನಲ್ಲಿ ಪೋಸ್ಟರ್ ಹಂಚಿಕೊಂಡು, “ಪೃಥ್ವಿ ಅವರೊಂದಿಗೆ ಮೊದಲ ಶಾಟ್ ಮಾಡಿದ ನಂತರ, ನೀವು ನಾನು ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರು ಎಂದು ಹೇಳಿದೆ. ಈ ಕ್ರೂರ, ನಿರ್ದಯ, ಪ್ರಬಲ ಪ್ರತಿಸ್ಪರ್ಧಿ ‘ಕುಂಭ’ನಿಗೆ ಜೀವ ತುಂಬುವುದು ಸೃಜನಾತ್ಮಕವಾಗಿ ಬಹಳ ತೃಪ್ತಿದಾಯಕವಾಗಿತ್ತು” ಎಂದು ಬರೆದು, ನಟನ ನಟನೆಯನ್ನು ಶ್ಲಾಘಿಸಿದ್ದಾರೆ. ಬಾಹುಬಲಿ, ಆರ್‌ ಆರ್‌ ಆರ್‌ ಚಿತ್ರಗಳಿಂದ ದೇಶ-ವಿದೇಶಗಳಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಎಸ್‌ ಎಸ್‌ ರಾಜಮೌಳಿಯವರ ಮುಂದಿನ ಈ ಪ್ರಾಜೆಕ್ಟಗಾಗಿ ಜಾಗತಿಕ ಮಟ್ಟದಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟಿಸಿದೆ.

    ಇದನ್ನೂ ಓದಿ :ರಜಿನಿಕಾಂತ್ 173 ನೇ ಚಿತ್ರಕ್ಕೆ ಕಮಲ್‌ ಹಾಸನ್ ನಿರ್ಮಾಪಕ; ಬಿಡುಗಡೆ ದಿನವೂ ಫಿಕ್ಷ್.

    ಜಾಗತಿಕ ಸಾಹಸ ಕಥೆ
    ‘ಗ್ಲೋಬ್‌ಟ್ರೋಟರ್’ ಎಂದು ಕರೆಯಲ್ಪಡುವ ಈ ಚಿತ್ರವು ವಿಶ್ವದಾದ್ಯಂತ ನಡೆಯುವ ಒಂದು ಸಾಹಸಮಯ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ ಎನ್ನಲಾಗಿದೆ. ಈಗಾಗಲೇ ಚಿತ್ರತಂಡ ಭಾರತದ ಹಲವು ಪ್ರದೇಶಗಳು ಮತ್ತು ಕೀನ್ಯಾದಂತಹ ವಿದೇಶಗಳಲ್ಲಿ ಚಿತ್ರೀಕರಣ ನಡೆಸಿದೆ. ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡಾ ನಟಿಸುವ ಸಾಧ್ಯತೆ ಇದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

    ನವೆಂಬರ್ 15ಕ್ಕೆ ಟೈಟಲ್ ಮತ್ತು ಟೀಸರ್ ಅನಾವರಣ
    ಈ ಬೃಹತ್ ಬಜೆಟ್ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಚಿತ್ರದ ಅಧಿಕೃತ ಶೀರ್ಷಿಕೆ ಮತ್ತು ಮಹೇಶ್ ಬಾಬು ಅವರ ಮೊದಲ ನೋಟದೊಂದಿಗೆ, ಒಂದು 2 ನಿಮಿಷಗಳ ಪ್ರೋಮೋವನ್ನು ಸಹ ನವೆಂಬರ್ 15 ರಂದು ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಈ ಕಾರ್ಯಕ್ರಮವನ್ನು ಓಟಿಟಿ ವೇದಿಕೆಯಾದ ಜಿಯೋ ಹಾಟ್‌ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

    ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಮೊದಲ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಒಂದಾಗಲಿದೆ ಎಂದು ಹೇಳಲಾಗುತ್ತಿದೆ. ವಿಲನ್ ‘ಕುಂಭ’ನ ಫಸ್ಟ್‌ ಲುಕ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ

    After canning the first shot with Prithvi, I walked up to him and said you are one of the finest actors I’ve ever known.

    Bringing life to this sinister, ruthless, powerful antagonist KUMBHA was creatively very satisfying.

    Thank you Prithvi for slipping into his chair…… pic.twitter.com/E6OVBK1QUS

    — rajamouli ss (@ssrajamouli) November 7, 2025
    mahesh babu mahesh babu upcoming movie movie news movie news in kannada pan india movie prithviraj sukumaran ss rajamouli ssmb29 updates tollywood movie
    Share. Facebook Twitter WhatsApp LinkedIn Email
    Previous ArticleApocalypto(2006); ಬೇಟೆಗಾರರೇ ಬೇಟೆಯಾದ ರೋಚಕ ಕಥೆಯುಳ್ಳ ಈ ಚಿತ್ರ ನೀವು ನೋಡಲೇಬೆಕು
    Next Article ‘ಸಮ್ಮಾನ್ ಯೋಜನೆ’; BSNL ನಿಂದ ಹಿರಿಯ ನಾಗರಿಕರಿಗೆ ಭರ್ಜರಿ ಗಿಫ್ಟ್, ಕಡಿಮೆ ದರಕ್ಕೆ 1 ವರ್ಷ ವ್ಯಾಲಿಡಿಟಿ.

    Related Posts

    Entertainment

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026
    Entertainment

    Toxic Trailer: ಯಶ್ ‘ಟಾಕ್ಸಿಕ್’ ಟ್ರೈಲರ್ ರಿಲೀಸ್! ಫ್ಯಾನ್ಸ್ ಹೇಳಿದ್ದೇನು?

    August 9, 2026
    Entertainment

    ಹಾಲಿವುಡ್‌ಗೆ ಸೆಡ್ಡು ಹೊಡೆಯುವಂತಿದೆ ‘ರಾಮಾಯಣ’ ಟ್ರೈಲರ್: ರಾವಣನ ಲುಕ್ ನೋಡಿ ಫ್ಯಾನ್ಸ್ ಫಿದಾ!

    July 30, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Our Picks

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.