Close Menu
New Karnataka
    What's Hot

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

      August 30, 2026

      ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

      August 29, 2026

      ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

      August 26, 2026

      ಎಂದೂ ಕುಗ್ಗದ ಬಿಸಿನೆಸ್‌: ಮಹಿಳೆಯರಿಗೆ ಹೆಚ್ಚು ಲಾಭ ತರುವ ‘ಟೈಲರಿಂಗ್ ಉದ್ಯಮ’

      August 23, 2026

      Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

      August 20, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಗೃಹಲಕ್ಷ್ಮಿ ಯೋಜನೆ 2026: ಈ ತಪ್ಪು ಮಾಡಿದ್ರೆ ₹2,000 ಬರಲ್ಲ! ಹೊಸ ನಿಯಮಗಳು ಮತ್ತು ಅರ್ಜಿ ಸಲ್ಲಿಕೆ ಮಾಹಿತಿ
    Govt schemes

    ಗೃಹಲಕ್ಷ್ಮಿ ಯೋಜನೆ 2026: ಈ ತಪ್ಪು ಮಾಡಿದ್ರೆ ₹2,000 ಬರಲ್ಲ! ಹೊಸ ನಿಯಮಗಳು ಮತ್ತು ಅರ್ಜಿ ಸಲ್ಲಿಕೆ ಮಾಹಿತಿ

    New KarnatakaBy New KarnatakaJune 16, 20262 Mins Read
    Share WhatsApp Facebook Twitter LinkedIn Telegram Email
    Gruha Lakshmi Yojana 2026
    Share
    WhatsApp Facebook Twitter LinkedIn Email

    ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ (ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು) ಸಂಬಂಧಿಸಿದಂತೆ 2026ರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 1.28 ಕೋಟಿ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅನರ್ಹರನ್ನು ಕೈಬಿಟ್ಟು, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವ ನಿಟ್ಟಿನಲ್ಲಿ ಸರ್ಕಾರವು ಅರ್ಜಿ ಸಲ್ಲಿಕೆ ಮತ್ತು ನವೀಕರಣಕ್ಕೆ (Renewal) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.

    ಇದರ ಸಂಪೂರ್ಣ ವಿವರ, ಅರ್ಹತೆಗಳು ಮತ್ತು ಅಗತ್ಯ ದಾಖಲೆಗಳ ಮಾಹಿತಿ ಕೆಳಗಿನಂತಿದೆ.

    ಯಾರು ಈ ಯೋಜನೆಗೆ ಅರ್ಹರಲ್ಲ?

    ಸರ್ಕಾರದ ಹೊಸ ನಿಯಮಗಳ ಪ್ರಕಾರ, ಈ ಕೆಳಗಿನ ವರ್ಗದವರು ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಿದರೂ ಹಣ ಪಡೆಯಲು ಅರ್ಹರಾಗಿರುವುದಿಲ್ಲ:

    • ಆದಾಯ ತೆರಿಗೆ ಪಾವತಿದಾರರು: ತೆರಿಗೆ ಪಾವತಿಸುವ ಕುಟುಂಬದ ಯಜಮಾನಿಯರು ಈ ಯೋಜನೆಗೆ ಅರ್ಹರಲ್ಲ.
    • ಕಾರ್ಡ್ ವರ್ಗಾವಣೆಯಾದವರು: ಆದಾಯ ತೆರಿಗೆ ಪಾವತಿಸುತ್ತಿರುವ ಕಾರಣಕ್ಕಾಗಿ ಬಿಪಿಎಲ್ (BPL) ಪಡಿತರ ಚೀಟಿಯಿಂದ ಎಪಿಎಲ್ (APL) ಪಡಿತರ ಚೀಟಿಗೆ ವರ್ಗಾವಣೆಯಾದ ಕಾರ್ಡುದಾರರು ಕೂಡ ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

    ಹೊಸ ಅರ್ಜಿ ಸಲ್ಲಿಕೆ ಮತ್ತು ನವೀಕರಣ ಎಲ್ಲಿ ಮಾಡಬೇಕು?

    ಅರ್ಜಿ ಸಲ್ಲಿಕೆಯಲ್ಲಿ ನಡೆಯಬಹುದಾದ ಗೊಂದಲಗಳನ್ನು ತಪ್ಪಿಸಲು, ಸರ್ಕಾರವು ಕೇವಲ ೩ ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ರಾಜ್ಯಾದ್ಯಂತ ಇರುವ ಸುಮಾರು 15,000ಕ್ಕೂ ಅಧಿಕೃತ ಕೇಂದ್ರಗಳನ್ನು ನೀವು ಸಂಪರ್ಕಿಸಬಹುದು:

    • ಬೆಂಗಳೂರು ಒನ್ / ಜಿಲ್ಲಾ ಒನ್ ಕೇಂದ್ರಗಳು
    • ಕರ್ನಾಟಕ ಒನ್ ಕೇಂದ್ರಗಳು
    • ಗ್ರಾಮ ಒನ್ ಕೇಂದ್ರಗಳು

    ಮುಖ್ಯ ಸೂಚನೆ: ಯಾವುದೇ ಖಾಸಗಿ ಸೈಬರ್ ಸೆಂಟರ್‌ಗಳಲ್ಲಿ (Cyber Centers) ಅಥವಾ ಮೊಬೈಲ್ ಆ್ಯಪ್‌ಗಳ ಮೂಲಕ ಅರ್ಜಿ ಸಲ್ಲಿಸಲು ಹಾಗೂ ನವೀಕರಿಸಲು ಯಾವುದೇ ಅವಕಾಶವಿರುವುದಿಲ್ಲ. ಫಲಾನುಭವಿಗಳು ಕಡ್ಡಾಯವಾಗಿ ಮೇಲ್ಕಂಡ ಸರ್ಕಾರಿ ಕೇಂದ್ರಗಳಿಗೆ ಭೇಟಿ ನೀಡಬೇಕು.

    D K Shivakumar
    Photo Source: x.com/DKShivakumar

    ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು

    ಹೊಸ ಅರ್ಜಿ ಸಲ್ಲಿಕೆ ಹಾಗೂ ನವೀಕರಣ ಪ್ರಕ್ರಿಯೆಗೆ ಈ ಕೆಳಗಿನ ೫ ಪ್ರಮುಖ ದಾಖಲೆಗಳು ಕಡ್ಡಾಯವಾಗಿದೆ:

    • ಮನೆಯ ಯಜಮಾನಿಯ ಹೆಸರು ಮತ್ತು ಆಧಾರ್ ಸಂಖ್ಯೆ.
    • ಮನೆಯ ಯಜಮಾನಿಯ ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳು (ಪಾಸ್‌ಬುಕ್).
    • ಫಲಾನುಭವಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
    • ಮನೆಯ ಯಜಮಾನಿಯ ಪತಿಯ (ಗಂಡನ) ಹೆಸರು ಮತ್ತು ಅವರ ಆಧಾರ್ ಕಾರ್ಡ್ ಸಂಖ್ಯೆ.
    • ಚಾಲ್ತಿಯಲ್ಲಿರುವ (Active) ಎಪಿಎಲ್ (APL) ಅಥವಾ ಬಿಪಿಎಲ್ (BPL) ಪಡಿತರ ಚೀಟಿ.

    ಪ್ರಸ್ತುತ ಕಂತುಗಳ ಸ್ಥಿತಿ ಮತ್ತು ಮುಂದಿನ ಪ್ರಕ್ರಿಯೆ

    • ಹಣ ಬಿಡುಗಡೆ ಮಾಹಿತಿ: ಈಗಾಗಲೇ ಫಲಾನುಭವಿಗಳ ಖಾತೆಗೆ ಮಾರ್ಚ್ ತಿಂಗಳ ಕಂತಿನ ಹಣ ಜಮೆಯಾಗಿದೆ. ಮೇ ತಿಂಗಳ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕ ತಕ್ಷಣ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ.
    • ನವೀಕರಣ ಯಾವಾಗ?: ಬಾಕಿ ಇರುವ ಎಲ್ಲಾ ಕಂತುಗಳ ಹಣ ಸಂಪೂರ್ಣವಾಗಿ ಬಿಡುಗಡೆಯಾದ ಬಳಿಕವಷ್ಟೇ, ಹೊಸ ಅರ್ಜಿ ಸಲ್ಲಿಕೆ ಮತ್ತು ನವೀಕರಣ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.
    • ಮತ್ತೊಮ್ಮೆ ಅರ್ಜಿ ಸಲ್ಲಿಕೆ ಕಡ್ಡಾಯ: ಕೇವಲ ಅರ್ಹರಿಗೆ ಮಾತ್ರ ಯೋಜನೆ ತಲುಪುವಂತೆ ಮಾಡಲು, ಪ್ರಸ್ತುತ ಇರುವ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಿ ತಮ್ಮ ಮಾಹಿತಿಯನ್ನು ನವೀಕರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

    ಇದನ್ನೂ ಓದಿ: ವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್: ಕೇವಲ 2000 ಡಾಲರ್‌ನಿಂದ ಶುರುವಾದ ರೋಚಕ ಪಯಣ

    Grama One Gruha Lakshmi Gruha Lakshmi Application 2026 Gruha Lakshmi new guidelines Gruha Lakshmi pending amount Gruha Lakshmi Scheme Karnataka Karnataka government schemes ಗೃಹಲಕ್ಷ್ಮಿ ಅರ್ಹತೆಗಳು ಗೃಹಲಕ್ಷ್ಮಿ ನವೀಕರಣ ಗೃಹಲಕ್ಷ್ಮಿ ಯೋಜನೆ 2026 ₹2000 scheme for women Karnataka
    Share. Facebook Twitter WhatsApp LinkedIn Email
    Previous Articleವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್: ಕೇವಲ 2000 ಡಾಲರ್‌ನಿಂದ ಶುರುವಾದ ರೋಚಕ ಪಯಣ
    Next Article ಸ್ವಂತ ಉದ್ಯಮ ಶುರು ಮಾಡಲು ಸುವರ್ಣಾವಕಾಶ: ರುಡ್‌ಸೆಟ್‌ ಸಂಸ್ಥೆಯಿಂದ ಸಂಪೂರ್ಣ ಉಚಿತ ಫಾಸ್ಟ್ ಫುಡ್ ತರಬೇತಿ!

    Related Posts

    Govt schemes

    ರಾಜ್ಯದ 1642 ಸರ್ಕಾರಿ ಶಾಲೆಗಳಲ್ಲಿ ‘ಎಐ’ ಕಲಿಕೆ: ತೃತೀಯ ಭಾಷೆಗೆ ಪರ್ಯಾಯವಾಯ್ತು ಕೃತಕ ಬುದ್ಧಿಮತ್ತೆ!

    July 26, 2026
    Govt schemes

    ಕರ್ನಾಟಕದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ: ಅರ್ಜಿ ಆಹ್ವಾನ

    July 25, 2026
    Govt schemes

    ರಾಜ್ಯದ ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ಶೇ. 12.5ರಷ್ಟು ಮೂಲ ವೇತನ ಹೆಚ್ಚಳ

    July 3, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Our Picks

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.