ಜಿ ಎಸ್ ಟಿ 2.0 ತೆರಿಗೆ ನೀತಿ ಅಡಿ ವಾಹನಗಳ ಮೇಲಿನ ತೆರಿಗೆ ಇಳಿಕೆಯಿಂದಾಗಿ ಭಾರತೀಯ ಆಟೋಮೊಬೈಲ್ ಉದ್ಯಮದ ಒಂದು ಸುವರ್ಣಕಾಲ ಎಂದು ಹೇಳಬಹುದು.
ಟಾಟಾ ಮೋಟಾರ್ಸ್ ಕಂಪನಿ ಸೆಪ್ಟೆಂಬರ್ 2025ರಲ್ಲಿ ತನ್ನ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಗಣನೀಯ ಸಾಧನೆ ಮಾಡಿದ್ದು, ಮಹೀಂದ್ರಾ, ಹ್ಯುಂಡೈ ಕಂಪನಿಗಳನ್ನು ಹಿಂದಿಕ್ಕಿ 2 ಸ್ಥಾನವನ್ನು ಗಳಿಸಿದೆ. ಮಾರುತಿ ಸುಜುಕಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರೂ ಸಹ ಟಾಟಾದ ಈ ಏರಿಕೆಯು ಉದ್ಯಮದಲ್ಲಿನ ಸ್ಪರ್ಧಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ.
ಸೆಪ್ಟೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್‌ನ ಪ್ಯಾಸೆಂಜರ್ ವಾಹನಗಳ ಮಾರಾಟ 60,907 ಯುನಿಟ್‌ಗಳು ಮಾರಾಟವಾಗಿದ್ದು, ಇದು ಕಳೆದ ವರ್ಷದ ಸೆಪ್ಟೆಂಬರ್‌ನ 41,313 ಯುನಿಟ್‌ಗಳಿಗೆ ಹೋಲಿಸಿದರೆ 47.4 % ಬೆಳವಣಿಗೆ ಕಂಡಿದೆ. ದೇಶೀಯ ಮಾರಾಟದಲ್ಲಿ 59,667 ಯುನಿಟ್ ಗಳು ಮಾರಾಟವಾಗಿದ್ದು, ಇದು ಕಂಪನಿಯ ಇತಿಹಾಸದಲ್ಲಿ ಅತ್ಯುತ್ತಮ ಮಾಸಿಕ ಸಾಧನೆಯಾಗಿದೆ. ರಿಟೈಲ್ ಮಾರಾಟದಲ್ಲಿ ಟಾಟಾ 40,594 ಯುನಿಟ್ ಗಳು ಮಾರಾಟ ಮಾಡಿದ್ದು, ಮಹಿಂದ್ರದ 37,015 ಯುನಿಟ್‌ಗಳು ಮತ್ತು ಹ್ಯುಂಡೈಯ 35,443 ಯುನಿಟ್‌ಗಳು ನಂತರದ ಸ್ಥಾನಗಳನ್ನು ಪಡೆದಿದೆ. ಮಾರುತಿ ಸುಜುಕಿ 1,47,461 ಯುನಿಟ್ಗಳ ದೇಶೀಯ ಮಾರಾಟದೊಂದಿಗೆ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.
ಈ ಏರಿಕೆಯು ಭಾರತದ ಕಾರು ಮಾರುಕಟ್ಟೆಯ ಸುವರ್ಣ ಕಾಲವನ್ನು ಪ್ರತಿಬಿಂಬಿಸುತ್ತದೆ. ಜಿ ಎಸ್ ಟಿ ತೆರಿಗೆ ಇಳಿಕೆಯಿಂದ ಗ್ರಾಹಕರು ಈಗ ತಮ್ಮ ಕನಸಿನ ವಾಹನಗಳನ್ನು ಖರೀದಿಸಲು ಉತ್ಸಾಹ ತೋರಿಸುತ್ತಿದ್ದಾರೆ. ಟಾಟಾದ ಈ ಯಶಸ್ಸು ಇತರ ಕಂಪನಿಗಳಿಗೂ ಸ್ಪರ್ಧೆಯನ್ನು ಹೆಚ್ಚಿಸುವಂತೆ ಮಾಡುತ್ತದೆ, ಇದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಾಹನಗಳು ದೊರೆಯುತ್ತವೆ.