ಏಷ್ಯಾದ ಅತಿದೊಡ್ಡ ಮೋಟಾರ್‌ಸೈಕಲ್ ಉತ್ಸವ ಇಂಡಿಯಾ ಬೈಕ್ ವೀಕ್ (IBW) 12 ನೇ ಆವೃತ್ತಿಯನ್ನು ಗೋವಾದ ವಗಾಟರ್‌ನಲ್ಲಿ ಡಿಸೆಂಬರ್ 12 ಮತ್ತು 13 ರಂದು ನಡೆಯಲು ಸಜ್ಜಾಗಿದೆ. ದಿನಾಂಕ ಫಿಕ್ಷ್ ಆಗುತ್ತಿದ್ದಂತೆ ಭಾರತಾದಾದ್ಯಂತದಿಂದ ಬೈಕ್ ಪ್ರೇಮಿಗಳು, ಮೋಟಾರ್ ಸೈಕಲ್ ಕ್ಲಬ್‌ಗಳು ಮತ್ತು ಬ್ರ್ಯಾಂಡ್‌ಗಳು ಭಾಗವಹಿಸಲು ಮತ್ತು ಸಂಭ್ರಮ ತುಂಬಿದ ಎರಡು ದಿನಗಳ ರೈಡಿಂಗ್ ಸ್ಪಿರಿಟ್, ಮ್ಯೂಸಿಕ್ ಮತ್ತು ಮೋಟಾರ್‌ಸೈಕಲ್ಗಳ ಸಂಯೋಜನೆಯನ್ನು ಕಣ್ ತುಂಬಿಸಿಕೊಳ್ಳಲು ಉತ್ಸಾಹ ತೋರಿದ್ದಾರೆ.
ಗೋವಾ, ತನ್ನ ಸುಂದರ ಬೀಚ್‌ಗಳು, ವಿಶಾಲ ರಸ್ತೆಗಳು ಮತ್ತು ಶಾಂತ ವಾತಾವರಣದೊಂದಿಗೆ ಇಂಡಿಯಾ ಬೈಕ್ ವೀಕ್ (IBW)ಗೆ ಪೂರಕ ಸ್ಥಳವಾಗಿದೆ. ಗೋವಾದ ವಗಾಟರ್ನಲ್ಲಿ ನಡೆಯುವ ಈ ಉತ್ಸವ ಕೇವಲ ಬೈಕ್ ಶೋ ಮಾತ್ರ ಅಲ್ಲ, ಬೈಕಿಂಗ್ ಸಂಸ್ಕೃತಿಯ ಒಂದು ಪೂರ್ಣ ರೂಪದ ಉತ್ಸವವಾಗಿದ್ದು, ಕಸ್ಟಮ್ ಬೈಕ್ ಬಿಲ್ಡ್ ಬೈಕ್‌ಗಳು, ಫ್ಲ್ಯಾಟ್ ಟ್ರ್ಯಾಕ್ ರೇಸ್‌ಗಳು, ಹೊಸ ಬೈಕ್ ಮಾಡೆಲ್ ಲಾಂಚ್‌ಗಳು, ಲೈವ್ ಮ್ಯೂಸಿಕ್ ಮತ್ತು ಸ್ಟಂಟ್ ಶೋಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ : ಹೊಸ ಆವಿಷ್ಕಾರದ ಮಾರುತಿ ಸುಜುಕಿ ವಿಕ್ಟೋರಿಸ್; ಗ್ರಾಹಕರಿಗೆ ಡೆಲಿವರಿ ಆರಂಭ
ವಿವಿಧ ಮೊಟಾರ್ ಸೈಕಲ್ ಕಂಪನಿಗಳು ತಮ್ಮ ಹೊಸ ಬೈಕ್ ಗಳನ್ನು ಪ್ರದರ್ಶನಕಿಟ್ಟು ಪ್ರಚರಪಡಿಸುತ್ತದೆ, ಬೈಕ್ ಗಳ ಆಧುನಿಕ ಬಿಡಿಭಾಗಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ. ಜಗತ್ತಿನಲ್ಲೇ ಅತಿ ದುಬಾರಿ ಎಂದು ಕರೆದುಕೊಳ್ಳುವ ಬೈಕ್ ಗಳನ್ನು ಕಣ್ ತುಂಬಿಕೊಳ್ಳುವುದಕ್ಕೆ ಸಾವಿರಾರು ಬೈಕ್ ಪ್ರೇಮಿಗಳು ದೇಶದ ವಿವಿಧ ಭಾಗಗಳಿಂದ ಬಂದಿರುತ್ತಾರೆ. ಮಹಿಳಾ ಬೈಕ್ ರೈಡರ್‌ಗಳು ಸಹ ತಮ್ಮ ಸುಪರ್ ಬೈಕ್ ಗಳೊಂದಿಗೆ ಕಿಕ್ಕಿರಿದು ಸೇರಿರುತ್ತಾರೆ. ಮಹಿಳೆಯರ ಭಾಗವಹಿಸುವಿಕೆಯ ಪ್ರೋತ್ಸಾಹಕ್ಕಾಗಿ ಮಹಿಳಾ ರೇಸ್ ಗಳು ಮತ್ತು ಸ್ಟಂಟ್ ಗಳನ್ನು ಆಯೋಜಿಸಿರುತ್ತಾರೆ.
ಪ್ರಸಿದ್ಧ ಕಸ್ಟಮ್ ಬೈಕ್ ವಿನ್ಯಾಸಕಾರರು ತಯಾರಿಸಿದ ಕಸ್ಟಮ್ ಮೇಡ್ ಬೈಕ್ ಗಳು ಉತ್ಸವದ ಪ್ರಮುಖ ಆಕರ್ಷಣೆ ಯಾಗಿರುತ್ತದೆ.
ಅರ್ಲಿ ಬರ್ಡ್ ಟಿಕೆಟ್‌ಗಳು ಅಕ್ಟೋಬರ್ 11 ರಿಂದ 19 ರವರೆಗೆ indiabikeweek.in ವೆಬ್‌ಸೈಟ್‌ನಲ್ಲಿ ಡಿಸ್ಕೌಂಟ್ ನಲ್ಲಿ ಲಭ್ಯವಿರುತ್ತವೆ. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ನ್ನು ಸಂಪರ್ಕಿಸಿ.
IBW 2025 ಎಂದರೆ ಕೇವಲ ಉತ್ಸವ ಅಲ್ಲ, ಬೈಕಿಂಗ್‌ನ ಆತ್ಮವನ್ನು ಆಚರಿಸುವ ಒಂದು ಜರ್ನಿ. ಎಂಜಿನ್‌ಗಳ ಗರ್ಜನೆ, ಸಂಗೀತದ ಧ್ವನಿ ಮತ್ತು ಬೈಕ್ ಪ್ರೇಮಿಗಳ ಸಮಾಗಮ. ಈ ಡಿಸೆಂಬರ್ ಗೋವಾದಲ್ಲಿ ಎಂದು ನಿಮ್ಮ ಕ್ಯಾಲೆಂಡರ್ ನಲ್ಲಿ ಮಾರ್ಕ್ ಮಾಡಿ. ರೈಡ್ ಆರಂಭಿಸಿ, ಉತ್ಸವವನ್ನು ಆನಂದಿಸಿ, ವರ್ಷದ ಅತ್ಯುತ್ತಮ ಇಯರ್ ಎಂಡ್ ನಿಮ್ಮದಾಗಿಸಿಕೊಳ್ಳಿ.
-END-