Close Menu
New Karnataka
    What's Hot

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

      July 15, 2026

      ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

      July 14, 2026

      ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

      July 14, 2026

      ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

      July 13, 2026

      KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!

      July 13, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » JAR App; ಸಣ್ಣ ಉಳಿತಾಯ, ದೊಡ್ಡ ಸಂಪತ್ತಿನ ನಿರ್ಮಾಣ. ಇಂದಿನ ಪಿಳಿಗೆಯ ಉಳಿತಾಯಕ್ಕೊಂದು ಅಪ್ಲಿಕೇಶನ್
    Finance

    JAR App; ಸಣ್ಣ ಉಳಿತಾಯ, ದೊಡ್ಡ ಸಂಪತ್ತಿನ ನಿರ್ಮಾಣ. ಇಂದಿನ ಪಿಳಿಗೆಯ ಉಳಿತಾಯಕ್ಕೊಂದು ಅಪ್ಲಿಕೇಶನ್

    New KarnatakaBy New KarnatakaOctober 16, 2025Updated:October 17, 20253 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಇಂದಿನ ಡಿಜಿಟಲ್ ಯುಗದಲ್ಲಿ, ಹಣವನ್ನು ಉಳಿಸುವುದು ಮತ್ತು ಹೂಡಿಕೆ ಮಾಡುವುದು ಸುಲಭವಾಗಿದೆ. ಜಾರ್ ಅಪ್ಲಿಕೇಶನ್ ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ಗೋಲ್ಡ್ ಉಳಿತಾಯ ಅಪ್ಲಿಕೇಶನ್ ಆಗಿದ್ದು, ಬಳಕೆದಾರರಿಗೆ ಪ್ರತಿದಿನ, ವಾರಕ್ಕೊಮ್ಮೆ ಅಥವಾ ಮಾಸಿಕವಾಗಿ 24K ಗೋಲ್ಡ್‌ನಲ್ಲಿ ಹಣವನ್ನು ಉಳಿಸುವ ಸೌಲಭ್ಯವನ್ನು ನೀಡುತ್ತದೆ.
    ಈ ಅಪ್ಲಿಕೇಶನ್ ನಿಮ್ಮ ಆನ್‌ಲೈನ್ ವಹಿವಾಟುಗಳಿಂದ ಬರುವ ಚಿಲ್ಲರೆ ಹಣವನ್ನು ಸ್ವಯಂಚಾಲಿತವಾಗಿ ರೌಂಡ್ ಅಪ್ ಮಾಡಿ ಡಿಜಿಟಲ್ ಗೋಲ್ಡ್‌ಗೆ ಪರಿವರ್ತಿಸುತ್ತದೆ. 4 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ಅಪ್ಲಿಕೇಶನ್, ಹಣವನ್ನು ಸುರಕ್ಷಿತವಾಗಿ ಉಳಿಸುವ ಮತ್ತು ಬೆಳೆಸುವ ಮಾರ್ಗವನ್ನು ಒದಗಿಸುತ್ತದೆ.


    ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

    ಜಾರ್ ಆಪ್ SafeGold ಅಥವಾ Augmont ಎಂಬ ಮಾನ್ಯ ಮತ್ತು ಭದ್ರ (Secure) ಡಿಜಿಟಲ್ ಗೋಲ್ಡ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಕೆಲಸ ಮಾಡುತ್ತದೆ. ಅಂದರೆ ನೀವು ಹೂಡಿದ ಪ್ರತಿಯೊಂದು ರೂಪಾಯಿ ಸರ್ಕಾರದ ಮಾನ್ಯವಾಗಿ ಭದ್ರವಾಗಿ ಗೋಲ್ಡ್‌ ರೂಪದಲ್ಲಿ ಉಳಿಯುತ್ತದೆ, ಮತ್ತು ಅದರ ಮೌಲ್ಯವು ಮಾರುಕಟ್ಟೆಯ ಚಿನ್ನದ ದರದಂತೆ ಏರಿಳಿತಗೊಳ್ಳುತ್ತದೆ.

    ಹೂಡಿಕೆ ಹೇಗೆ ಮಾಡಬಹುದು?

    ಜಾರ್ ಆಪ್ ಡೌನ್‌ಲೋಡ್ ಮಾಡಿ (Google Play Store ಅಥವಾ iOS App Store ನಲ್ಲಿ ಲಭ್ಯ).

    ಮೊಬೈಲ್ ನಂಬರಿನಿಂದ OTP ಮೂಲಕ ಲಾಗಿನ್ ಮಾಡಿ.

    ನಿಮ್ಮ ಬ್ಯಾಂಕ್ ಅಥವಾ UPI ಖಾತೆಯನ್ನು ಲಿಂಕ್ ಮಾಡಿ.

    ಆ ನಂತರ “Auto Save” ಆಯ್ಕೆಯನ್ನು ಆನ್ ಮಾಡಿದರೆ, ಪ್ರತಿ ಖರೀದಿಯ ನಂತರ ಉಳಿಯುವ ಹಣ ಸ್ವಯಂಚಾಲಿತವಾಗಿ ಹೂಡಿಕೆಯಾಗುತ್ತದೆ.

    ಅಥವಾ ನೀವು ಮಾನುಯಲ್ ಹೂಡಿಕೆ ಆಯ್ಕೆ ಮಾಡಿಕೊಂಡು ನಿಮ್ಮ ಇಷ್ಟದ ಮೊತ್ತವನ್ನು ಹೂಡಬಹುದು.

    ಜಾರ್ ಆಪ್‌ನ ಪ್ರಯೋಜನಗಳು
    ಜಾರ್ ಅಪ್ಲಿಕೇಶನ್‌ನ ಪ್ರಯೋಜನಗಳು ಹಲವು. ಮೊದಲನೆಯದಾಗಿ, ಇದು ಸಣ್ಣ ಮೊತ್ತಗಳಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸುತ್ತದೆ ಮತ್ತು ಗೋಲ್ಡ್ ಬೆಲೆಯ ಏರಿಕೆಯಿಂದ ಲಾಭವನ್ನು ನೀಡುತ್ತದೆ. ಇದು ಹಣದುಬ್ಬರದ ವಿರುದ್ಧ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಸಂಗ್ರಹಣೆಗೆ ಯಾವುದೇ ಶುಲ್ಕವಿಲ್ಲ, ಸುರಕ್ಷಿತ ಮತ್ತು 99.95% ಶುದ್ಧ ಗೋಲ್ಡ್. ಮನೆಯಿಂದಲೇ ಖರೀದಿ ಮತ್ತು ಮಾರಾಟ ಮಾಡಬಹುದು, ಮತ್ತು ಹೆಚ್ಚುವರಿ ಸೇವೆಗಳಾದ ಸಾಲಗಳು ಮತ್ತು ವಿಮೆಯನ್ನು ಒದಗಿಸುತ್ತದೆ. ಇದು ಸಾಂಪ್ರದಾಯಿಕ ಗೋಲ್ಡ್ ಖರೀದಿಯ ಸಮಸ್ಯೆಗಳಾದ ಕಳ್ಳತನ ಅಥವಾ ಸುರಕ್ಷಿತವಾಗಿ ಭದ್ರತೆ ಮಾಡುವ ಒತ್ತಡವನ್ನು ತಪ್ಪಿಸುತ್ತದೆ.

    ಈ ವಿಧಾನ ಸ್ವಯಂಚಾಲಿತ ಉಳಿತಾಯ — ನೀವು ಯೋಚನೆ ಮಾಡಬೇಕಾಗಿಲ್ಲ,

    ಚಿಲ್ಲರೆ ಹಣದಿಂದಲೂ ಹೂಡಿಕೆ ಸಾಧ್ಯ- ನೀವು ಕನಿಷ್ಟ 10 ರೂಪಾಯಿ ಕೂಡ ಉಳಿತಾಯ ಮಾಡಬಹುದು

    ಯಾವುದೇ ಸಮಯದಲ್ಲಿ ಹಣ ಹಿಂತೆಗೆದುಕೊಳ್ಳಬಹುದು

    ಸುರಕ್ಷಿತ ಮತ್ತು ಪಾರದರ್ಶಕ ಪ್ಲಾಟ್‌ಫಾರ್ಮ್

    ಆರ್ಥಿಕ ಶಿಸ್ತು ಬೆಳೆಸಲು ಸಹಕಾರಿ

    ಪ್ರಾರಂಭಿಕರಿಗೆ ಹೂಡಿಕೆಯ ಮೊದಲ ಹೆಜ್ಜೆಯಾಗಿ ಸೂಕ್ತ

    ಇದನ್ನೂ ಓದಿ: Winter is Coming; ಚಳಿಗಾಲದಲ್ಲಿ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲಿ ಅನುಸರಿಸಬೇಕಾದ ಸರಳ ಅಂಶಗಳು

    ಹಣವನ್ನು ಹಿಂತೆಗೆದುಕೊಳ್ಳುವುದು (Withdraw)

    ಜಾರ್ ಆಪ್‌ನಲ್ಲಿ ಸಂಗ್ರಹವಾದ ಡಿಜಿಟಲ್ ಗೋಲ್ಡ್ ಅನ್ನು ಯಾವುದೇ ಸಮಯದಲ್ಲಿ ಮಾರಾಟ ಮಾಡಿ, ಅದರ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಅಥವಾ UPI ಗೆ ಹಿಂತೆಗೆದುಕೊಳ್ಳಬಹುದು. ಹಿಂತೆಗೆದುಕೊಳ್ಳುವಿಕೆ ಪ್ರಕ್ರಿಯೆ ಸುಲಭವಾಗಿದ್ದು, ಸಾಮಾನ್ಯವಾಗಿ ಕೆಲವು ನಿಮಿಷಗಳಲ್ಲಿ ಮೊತ್ತವನ್ನು ಪಡೆಯಬಹುದು.

    ಇಂದಿನ ಪೀಳಿಗೆಗೆ ಇದರ ಮಹತ್ವ
    ಇಂದಿನ ಯುವಕರು ವೇಗದ ಜೀವನಶೈಲಿ, ಆರ್ಥಿಕ ಅನಿಶ್ಚಿತತೆ ಮತ್ತು ಹಣದುಬ್ಬರದೊಂದಿಗೆ ಹೋರಾಡುತ್ತಿದ್ದಾರೆ. ಈ ಅಪ್ಲಿಕೇಶನ್‌ಗಳು ಸ್ವಯಂಚಾಲಿತ ಉಳಿತಾಯವನ್ನು ಸಾಧ್ಯಗೊಳಿಸುತ್ತವೆ, ಹಣಕಾಸು ಶಿಸ್ತನ್ನು ಬೆಳೆಸುತ್ತವೆ ಮತ್ತು ಡಿಜಿಟಲ್ ಸಾಧನಗಳ ಮೂಲಕ ಸುಲಭವಾಗಿ ಹೂಡಿಕೆ ಮಾಡುವಂತೆ ಮಾಡುತ್ತವೆ. ಗೋಲ್ಡ್ ನಂತಹ ಸುರಕ್ಷಿತ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು ಭವಿಷ್ಯದ ಆರ್ಥಿಕ ಸ್ಥಿರತೆಗೆ ಸಹಾಯ ಮಾಡುತ್ತದೆ.

    ಇದು ಹಣಕಾಸು ಸಾಕ್ಷರತೆಯನ್ನು ಹೆಚ್ಚಿಸುತ್ತದೆ ಮತ್ತು ಸಣ್ಣ ಉಳಿತಾಯಗಳಿಂದ ದೊಡ್ಡ ಸಂಪತ್ತನ್ನು ನಿರ್ಮಿಸುವ ಮಾರ್ಗವನ್ನು ತೋರಿಸುತ್ತದೆ.
    ಜಾರ್ ಅಪ್ ಸ್ವಯಂಚಾಲಿತವಾಗಿ ಉಳಿತಾಯ ಮಾಡುವ ಅಭ್ಯಾಸವನ್ನು ಬೆಳೆಸುತ್ತದೆ, ಇದು ಆರ್ಥಿಕ ಸ್ಥಿರತೆ ಮತ್ತು ಭವಿಷ್ಯದ ಭದ್ರತೆಗಾಗಿ ಅತ್ಯಗತ್ಯ. ಸಣ್ಣ ಮೊತ್ತಗಳಿಂದ ಪ್ರಾರಂಭಿಸಿ ನಿಧಾನವಾಗಿ ದೊಡ್ಡ ಮೊತ್ತದ ಹೂಡಿಕೆ ಮಾಡಲು ಇದು ಮಾರ್ಗದರ್ಶನ ನೀಡುತ್ತದೆ.

    ಜಾರ್ ಅಪ್ಲಿಕೇಶನ್ ಭಾರತೀಯರ ಉಳಿತಾಯ ಸಂಸ್ಕೃತಿಯನ್ನು ಆಧುನಿಕಗೊಳಿಸುತ್ತಿದೆ. ಇದನ್ನು ಬಳಸಿ ನಿಮ್ಮ ಉಳಿತಾಯ ಪಯಣವನ್ನು ಆರಂಭಿಸಿ ಮತ್ತು ಭವಿಷ್ಯಕ್ಕಾಗಿ ಸಿದ್ಧರಾಗಿ.‌

    DISCLAIMERS:
    The information shared in this article is for educational purposes only. Please don't consider it as an investment recommendation. Kindly consult an authorized investment adviser before making any decisions
    24 carat gold finance gold google play store investment jar app lifestyle money saving app upi wealth
    Share. Facebook Twitter WhatsApp LinkedIn Email
    Previous Articleಗೂಗಲ್‌ ಭಾರತದಲ್ಲಿ 15 ಬಿಲಿಯನ್‌ ಡಾಲರ್‌ ಹೂಡಿಕೆ ನಿರ್ಧಾರ; ವಿಶಾಖಪಟ್ಟಣ (ವೈಜಾಗ್)ದಲ್ಲಿ ಮೊದಲ Ai ಹಬ್
    Next Article ಪೂರ್ಣ ಚಂದ್ರ ತೇಜಸ್ವಿ ರೋಚಕ ಕಾದಂಬರಿ ಬೆಳ್ಳಿ ಪರದೆಗೆ; ಜುಗಾರಿ ಕ್ರಾಸ್‌ ಗೆ ರಾಜ್‌ ಬಿ ಶೆಟ್ಟಿ ನಾಯಕ.

    Related Posts

    Finance

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026
    Finance

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Lifestyle

    ವಿ-ಗಾರ್ಡ್‌ನಿಂದ ಹೊಸ ‘Emocia’ ಏರ್ ಫ್ರೈಯರ್ ಬಿಡುಗಡೆ: ಬೆಲೆ ಮತ್ತು ಫೀಚರ್ಸ್ ಇಲ್ಲಿದೆ!

    July 9, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Our Picks

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.