Close Menu
New Karnataka
    What's Hot

    ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ರುಡ್‌ಸೆಟ್ ಸಂಸ್ಥೆಯಿಂದ ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ಟ್ಯಾಲಿ ಮತ್ತು ಕಂಪ್ಯೂಟರ್ ತರಬೇತಿ

    June 9, 2026

    KSP Recruitment 2026: ರಾಜ್ಯ ಪೊಲೀಸ್ ಇಲಾಖೆಯಲ್ಲಿ 3991 ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    June 8, 2026

    ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ತರಬೇತಿ; ಇಂದೇ ಅರ್ಜಿ ಸಲ್ಲಿಸಿ

    June 8, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ರುಡ್‌ಸೆಟ್ ಸಂಸ್ಥೆಯಿಂದ ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ಟ್ಯಾಲಿ ಮತ್ತು ಕಂಪ್ಯೂಟರ್ ತರಬೇತಿ

      June 9, 2026

      KSP Recruitment 2026: ರಾಜ್ಯ ಪೊಲೀಸ್ ಇಲಾಖೆಯಲ್ಲಿ 3991 ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

      June 8, 2026

      ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ತರಬೇತಿ; ಇಂದೇ ಅರ್ಜಿ ಸಲ್ಲಿಸಿ

      June 8, 2026

      ರಜತ್ ಪಾಟಿದಾರ್‌ಗೆ ಅನ್ಯಾಯ: ಟೀಮ್ ಇಂಡಿಯಾ ಆಯ್ಕೆ ವಿರುದ್ಧ ಹರ್ಭಜನ್ ಸಿಂಗ್ ಬೇಸರ

      June 6, 2026

      ಜೂನಿಯರ್ ಕಿಚ್ಚನ “ಮ್ಯಾಂಗೋ ಪಚ್ಚ” ಹೇಗಿದೆ? ಪ್ರೇಕ್ಷಕರು ಹೇಳಿದ್ದೇನು!

      June 5, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಪೂರ್ಣ ಚಂದ್ರ ತೇಜಸ್ವಿ ರೋಚಕ ಕಾದಂಬರಿ ಬೆಳ್ಳಿ ಪರದೆಗೆ; ಜುಗಾರಿ ಕ್ರಾಸ್‌ ಗೆ ರಾಜ್‌ ಬಿ ಶೆಟ್ಟಿ ನಾಯಕ.
    Entertainment

    ಪೂರ್ಣ ಚಂದ್ರ ತೇಜಸ್ವಿ ರೋಚಕ ಕಾದಂಬರಿ ಬೆಳ್ಳಿ ಪರದೆಗೆ; ಜುಗಾರಿ ಕ್ರಾಸ್‌ ಗೆ ರಾಜ್‌ ಬಿ ಶೆಟ್ಟಿ ನಾಯಕ.

    ಕಳೆದ ಕೆಲವು ವರುಷಗಳಿಂದ ಈ ಕಾದಂಬರಿಯನ್ನು ಚಿತ್ರರೂಪಕ್ಕೆ ತರುವ ಪ್ರಯತ್ನಗಳು ನಡೆದಿವೆ. ಆದರೆ, ಕಾದಂಬರಿಯ ಸಂಕೀರ್ಣ ಕಥಾಹಂದರ, ತಿರುವುಗಳು ಮತ್ತು ಪರಿಸರ ಕಾಳಜಿಯನ್ನು ಚಿತ್ರರಂಗಕ್ಕೆ ತರುವುದು ಸವಾಲಿನ ಕೆಲಸವಾಗಿತ್ತು. ಹಿಂದಿನ ಕೆಲವು ಪ್ರಯತ್ನಗಳು ಆರಂಭಿಕ ಹಂತದಲ್ಲೇ ನಿಂತುಹೋಗಿದ್ದವು. ಆದರೆ ನಿರ್ದೇಶಕ ಗುರುದತ್ತ ಗಾಣಿಗ ಮತ್ತು ರಾಜ್ ಬಿ. ಶೆಟ್ಟಿ ಈ ಕನಸನ್ನು ನನಸಾಗಿಸುವ ತಯಾರಿಯಲ್ಲಿದ್ದಾರೆ.
    New KarnatakaBy New KarnatakaOctober 16, 2025Updated:October 17, 20252 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿ ಜುಗಾರಿ ಕ್ರಾಸ್ ಅಂತಿಮವಾಗಿ ಸಿನಿಮಾವಾಗಿ ತೆರೆಯ ಮೇಲೆ ಬರಲಿದೆ.
    ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ದೇಶಕ ಗುರುದತ್ತ ಗಾಣಿಗ ನಿರ್ದೇಶಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ನಟಿಸಲಿದ್ದಾರೆ.
    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗುರುದತ್ತ, ಈಗ ಕರಾವಳಿ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಜುಗಾ‌ರಿ ಕ್ರಾಸ್ ಕಾದಂಬರಿಯ ಚಿತ್ರ ರೂಪಾಂತರದ ಟೈಟಲ್‌ ಪ್ರೋಮೊ ಯೂಟ್ಯೂಬ್‌ ನಲ್ಲಿ ಬಿಡುಗಡೆಗೊಂಡು ಕನ್ನಡ ಸಿನಿಮಾ ಮತ್ತು ಸಾಹಿತ್ಯಾಸಕ್ತರಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

    1980ರಲ್ಲಿ ಪ್ರಕಟವಾದ “ಜುಗಾರಿ ಕ್ರಾಸ್” ಕಾದಂಬರಿಯು ಕನ್ನಡ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆಯುವ ಈ ಕಥೆಯು ರೈತ ದಂಪತಿಗಳ ಜೀವನದ ಸುತ್ತ ಸುತ್ತುತ್ತದೆ. ವನ್ಯಜೀವಿ ಕಳ್ಳಸಾಗಣಿಕೆ, ಕಾನೂನುಬಾಹಿರ ವ್ಯಾಪಾರ ಮತ್ತು ಅಪಾಯಕಾರಿ ಒಡನಾಟಗಳ ಜಾಲದಲ್ಲಿ ಸಿಕ್ಕಿಕೊಳ್ಳುವ ಈ ಕಥೆ, ಸಸ್ಪೆನ್ಸ್, ರೋಮಾಂಚನ ಮತ್ತು ಪರಿಸರ ಸಂದೇಶವನ್ನು ಸಮರ್ಥವಾಗಿ ಹೇಳಿದೆ. ತೇಜಸ್ವಿಯವರ ಸಾಹಿತ್ಯಯು ಮಲೆನಾಡಿನ ಸೌಂದರ್ಯವನ್ನು ಜೊತೆಗೆ ಮಾನವನ ದುರಾಸೆಯ ಛಾಯೆಯನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ.

    ಕಳೆದ ಕೆಲವು ವರುಷಗಳಿಂದ ಈ ಕಾದಂಬರಿಯನ್ನು ಚಿತ್ರರೂಪಕ್ಕೆ ತರುವ ಪ್ರಯತ್ನಗಳು ನಡೆದಿವೆ. ಆದರೆ, ಕಾದಂಬರಿಯ ಸಂಕೀರ್ಣ ಕಥಾಹಂದರ, ತಿರುವುಗಳು ಮತ್ತು ಪರಿಸರ ಕಾಳಜಿಯನ್ನು ಚಿತ್ರರಂಗಕ್ಕೆ ತರುವುದು ಸವಾಲಿನ ಕೆಲಸವಾಗಿತ್ತು. ಹಿಂದಿನ ಕೆಲವು ಪ್ರಯತ್ನಗಳು ಆರಂಭಿಕ ಹಂತದಲ್ಲೇ ನಿಂತುಹೋಗಿದ್ದವು. ಆದರೆ ನಿರ್ದೇಶಕ ಗುರುದತ್ತ ಗಾಣಿಗ ಮತ್ತು ರಾಜ್ ಬಿ. ಶೆಟ್ಟಿ ಈ ಕನಸನ್ನು ನನಸಾಗಿಸುವ ತಯಾರಿಯಲ್ಲಿದ್ದಾರೆ.

    ಗುರುದತ್ತ ಗಾಣಿಗ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದವರು. ಈಗ ಕರಾವಳಿ ಚಿತ್ರದ ಬಿಡುಗಡೆಗೆ ಸಿದ್ಧರಾಗಿರುವ ಗುರುದತ್ತ, ಈ ಶ್ರೇಷ್ಠಕೃತಿಯನ್ನು ಸಿನಿಮಾವಾಗಿಸುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಥೆಯ ಸಿನಿಮಾರೂಪಕ್ಕೆ ತಮ್ಮದೇ ಆದ ದೃಷ್ಟಿಕೋನವನ್ನು ತರುವ ಯತ್ನದಲ್ಲಿದ್ದಾರೆ. ಗುರುದತ್ತ ಗಾಣಿಗ ಫಿಲ್ಮ್ಸ್ ಮತ್ತು ಸಪ್ತಗಿರಿ ಎಂಟರ್‌ಟೈನ್‌ಮೆಂಟ್‌ನಡಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ರಾಜ್ ಬಿ. ಶೆಟ್ಟಿ ʼಸು ಫ್ರಂ ಸೋʼ ಚಿತ್ರದ ಯಶಸ್ಸಿನ ನಂತರ, ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಹೆಸರಾಗಿದ್ದಾರೆ. ಜುಗಾರಿ ಕ್ರಾಸ್‌ ನ ಪಾತ್ರಕ್ಕೆ ರಾಜ್ ಬಿ. ಶೆಟ್ಟಿಯವರ ಗಾಂಭೀರ್ಯ ಮತ್ತು ಭಾವನಾತ್ಮಕ ನಟನೆ ಸೂಕ್ತವಾಗಿದೆ.

    ಇದನ್ನೂ ಓದಿ: ಮೋದಿಯವರ ಭೇಟಿಯಾದಾಗ ನನಗೆ ಅವರ AURA ಅನುಭವವಾಯಿತು !! ರಿಷಭ್‌ ಶೆಟ್ಟಿ; ವೈರಲ್‌ ಆದ ಹೇಳಿಕೆ

    ಗುರುದತ್ತ ಗಾಣಿಗ ಕಾದಂಬರಿಯ ಮೂಲ ಸಾರವನ್ನು ಕಾಪಾಡಿಕೊಂಡು, ಆಧುನಿಕ ದೃಶ್ಯ ರೂಪಕ್ಕೆ ತಕ್ಕಂತೆ ಚಿತ್ರವನ್ನು ರೂಪಿಸುವ ಯೋಜನೆಯಲ್ಲಿದ್ದಾರೆ. ಚಿತ್ರೀಕರಣವು ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆಯಿದ್ದು, 2026 ಅಥವಾ 2027ರಲ್ಲಿ ಚಿತ್ರ ಬಿಡುಗಡೆಯಾಗಬಹುದು. ಮಲೆನಾಡಿನ ದೃಶ್ಯ ಸೌಂದರ್ಯವನ್ನು ಚಿತ್ರದಲ್ಲಿ ಕಟ್ಟಿಕೊಡುವುದು ಮತ್ತು ಕಾದಂಬರಿಯ ರೋಮಾಂಚಕ ತಿರುವುಗಳನ್ನು ಚಿತ್ರರೂಪಕ್ಕೆ ತರುವುದು ಚಿತ್ರತಂಡದ ಮುಖ್ಯ ಗುರಿಯಾಗಿದೆ.

    ಜುಗಾರಿ ಕ್ರಾಸ್ ಚಿತ್ರವು ಕನ್ನಡ ಸಾಹಿತ್ಯ ಮತ್ತು ಚಿತ್ರರಂಗದ ನಡುವಿನ ಸೇತುವೆಯಾಗಲಿದೆ. ತೇಜಸ್ವಿಯವರ ಕಾದಂಬರಿಯ ಆಳವಾದ ಸಂದೇಶಗಳು, ಪರಿಸರ ಕಾಳಜಿಯೊಂದಿಗೆ ರೋಮಾಂಚಕ ಕಥೆಯನ್ನು ಒಡ್ಡುವ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ. ಸಾಹಿತ್ಯಾಸಕ್ತರು ಮತ್ತು ಚಿತ್ರಪ್ರೇಮಿಗಳಿಗೆ ಈ ಚಿತ್ರವು ಒಂದು ದೃಶ್ಯ ರಸದೌತಣವನ್ನು ಒಡ್ಡಲಿದೆ.

    ದಶಕಗಳ ಕನಸು ನನಸಾಗುವ ಸಮಯ,, ತೇಜಸ್ವಿಯವರ ಕಲ್ಪನೆಯ ನಿಗೂಡ ‘ಜುಗಾರಿ ಕ್ರಾಸ್’ ನೊಳಗೆ ನಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭ,,https://t.co/bdkfTyEcFZ pic.twitter.com/e5QU3ZcR7P

    — Gurudatha (@gurudath_ganiga) October 16, 2025
    film updates movie novel poorna chandra tejasvi raj b shetty sandalwood suspense thriller movies
    Share. Facebook Twitter WhatsApp LinkedIn Email
    Previous ArticleJAR App; ಸಣ್ಣ ಉಳಿತಾಯ, ದೊಡ್ಡ ಸಂಪತ್ತಿನ ನಿರ್ಮಾಣ. ಇಂದಿನ ಪಿಳಿಗೆಯ ಉಳಿತಾಯಕ್ಕೊಂದು ಅಪ್ಲಿಕೇಶನ್
    Next Article ಆನೆಕಲ್‌ನಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್‌ ಸ್ಟೇಡಿಯಮ್‌- ಸಚಿವ ಸಂಪುಟ ಅನುಮೋದನೆ; ₹2350 ಕೋಟಿ ವೆಚ್ಚದಲ್ಲಿ ನಿರ್ಮಾಣ

    Related Posts

    Entertainment

    ಜೂನಿಯರ್ ಕಿಚ್ಚನ “ಮ್ಯಾಂಗೋ ಪಚ್ಚ” ಹೇಗಿದೆ? ಪ್ರೇಕ್ಷಕರು ಹೇಳಿದ್ದೇನು!

    June 5, 2026
    Entertainment

    ಕಾಂತಾರ ವಿವಾದ: ಕ್ಷಮೆ ಕೋರಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ನಟ ರಣವೀರ್ ಸಿಂಗ್

    May 26, 2026
    Entertainment

    ನಾನು ಇತರರ ಅಭಿಪ್ರಾಯಗಳನ್ನು ಕೇಳುವುದನ್ನು ನಿಲ್ಲಿಸಿದ್ದೇನೆ: ಡ್ರ್ಯಾಗನ್ ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಖಡಕ್ ಪ್ರತಿಕ್ರಿಯೆ

    May 24, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026839 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026499 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025299 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026839 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026499 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025299 Views
    Our Picks

    ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ರುಡ್‌ಸೆಟ್ ಸಂಸ್ಥೆಯಿಂದ ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ಟ್ಯಾಲಿ ಮತ್ತು ಕಂಪ್ಯೂಟರ್ ತರಬೇತಿ

    June 9, 2026

    KSP Recruitment 2026: ರಾಜ್ಯ ಪೊಲೀಸ್ ಇಲಾಖೆಯಲ್ಲಿ 3991 ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    June 8, 2026

    ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ತರಬೇತಿ; ಇಂದೇ ಅರ್ಜಿ ಸಲ್ಲಿಸಿ

    June 8, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.