ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಟಿವಿಎಸ್ ಮೋಟಾರ್ ಕಂಪನಿಯು ಮತ್ತೊಂದು ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಈಗಾಗಲೇ ಲುಕ್, ಪರ್ಫಾಮೆನ್ಸ್, ಪವರ್ ಗೆ ಹೆಸರಾಗಿ ಯಶಸ್ವಿಯಾಗಿರುವ Ntorq ಸರಣಿಗೆ ಹೊಸ ಸೇರ್ಪಡೆಯಾಗಿರುವ ‘Ntorq 150’ ಅನ್ನು ಕಂಪನಿ ಬಿಡುಗಡೆ ಮಾಡಿದೆ. ಇದು ದೇಶದ ಮೊದಲ ‘ಹೈಪರ್ ಸ್ಪೋರ್ಟ್ ಸ್ಕೂಟರ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುವ ಸವಾರರನ್ನು ಗುರಿಯಾಗಿಸಿಕೊಂಡು ವಿನ್ಯಾಸಗೊಳಿಸಲಾಗಿರುವ ಈ ಸ್ಕೂಟರ್, ಅತ್ಯಾಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳ ಸಂಗಮವಾಗಿದೆ.
ಸ್ಪೋರ್ಟ್ಸ್ ಬೈಕ್‌ನ ಅನುಭವ ನೀಡುವ ಶಕ್ತಿಶಾಲಿ ಎಂಜಿನ್
Ntorq 150 ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ 149.7 ಸಿಸಿ ಏರ್-ಕೂಲ್ಡ್, O3CTech ಎಂಜಿನ್ ಸ್ಕೂಟರ್ ವಿಭಾಗದಲ್ಲೇ ಹೊಸ ಪರ್ಫಾರ್ಮೆನ್ಸ್ ಅನುಭವವನ್ನು ನೀಡುತ್ತದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ ಸುಮಾರು 13.2 ಪಿಎಸ್ (PS) ಶಕ್ತಿ ಮತ್ತು 5,500 ಆರ್‌ಪಿಎಂನಲ್ಲಿ 14.2Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದು ಕೇವಲ 6.3 ಸೆಕೆಂಡ್‌ಗಳಲ್ಲಿ 0 ದಿಂದ 60ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 104 ಕಿ.ಮೀ ವರೆಗೆ ತಲುಪುತ್ತದೆ. ಸ್ಪೋರ್ಟಿ ಅನುಭವಕ್ಕಾಗಿ ಇದು ‘ರೇಸ್’ ಮತ್ತು ‘ಸ್ಟ್ರೀಟ್’ ಎಂಬ ಎರಡು ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ನೀಡುತ್ತದೆ. ಅತ್ಯಾಧುನಿಕ ವೈಶಿಷ್ಟ್ಯಗಳ ಮಹಾಪೂರ Ntorq 150 ಕೇವಲ ಶಕ್ತಿಯುತ ಮಾತ್ರವಲ್ಲ, ತಂತ್ರಜ್ಞಾನದಲ್ಲೂ ಮುಂಚೂಣಿಯಲ್ಲಿದೆ. ಇದು ಹೊಸ ಪೀಳಿಗೆಯ ಸವಾರರಿಗೆ ಬೇಕಾಗುವ ಎಲ್ಲಾ ಹೈಟೆಕ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸುರಕ್ಷತೆ: ಸ್ಕೂಟರ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಸಿಂಗಲ್-ಚಾನೆಲ್ ಎಬಿಎಸ್ (ABS – Anti-lock Braking System) ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಅನ್ನು ನೀಡಲಾಗಿದೆ.
ಕನೆಕ್ಟೆಡ್ ಟೆಕ್ನಾಲಜಿ: ಹೈ-ರೆಸಲ್ಯೂಷನ್ TFT (Thin-Film Transistor) ಕ್ಲಸ್ಟರ್ ಮತ್ತು ಬ್ಲೂಟೂತ್ ಸಂಪರ್ಕ ವೈಶಿಷ್ಟ್ಯವು 50 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳನ್ನು ನೀಡುತ್ತದೆ.
ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕ್ರ್ಯಾಶ್ ಮತ್ತು ಕಳ್ಳತನ ಎಚ್ಚರಿಕೆಗಳು, ವಾಹನ ಲೈವ್ ಟ್ರ್ಯಾಕಿಂಗ್ ಮತ್ತು ಲಾಸ್ಟ್ ಪಾರ್ಕ್ಡ್ ಲೊಕೇಶನ್‌ನಂತಹ ವೈಶಿಷ್ಟ್ಯಗಳಿವೆ.
ವಿನ್ಯಾಸ: ಈ ಸ್ಕೂಟರ್‌ನ ವಿನ್ಯಾಸವು ಸ್ಟೆಲ್ತ್ ವಿಮಾನದಿಂದ ಪ್ರೇರಿತವಾಗಿದೆ. ಮಲ್ಟಿಪಾಯಿಂಟ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಏರೋಡೈನಾಮಿಕ್ ವಿಂಗ್‌ಲೆಟ್‌ಗಳು, ಸ್ಪೋರ್ಟಿ ಟೈಲ್‌ಲ್ಯಾಂಪ್‌ಗಳು ಮತ್ತು ಬಣ್ಣದ ಅಲಾಯ್ ಚಕ್ರಗಳು ಇದಕ್ಕೆ ಆಕರ್ಷಕ ಲುಕ್ ನೀಡುತ್ತವೆ.
Ntorq ನ ಎಂಜಿನ್‌ನ ವಿಶಿಷ್ಟತೆಗಳು
ಬೆಲೆ ಮತ್ತು ಲಭ್ಯತೆ Ntorq 150 ಸ್ಕೂಟರ್ ಪ್ರಸ್ತುತ ಎರಡು ಪ್ರಮುಖ ವಿಧಗಳಲ್ಲಿ(Variant) ಲಭ್ಯವಿದೆ
Ntorq 150 Standard Rs 109400
Ntorq 150 TFT Rs 118400
(ಸೂಚನೆ: ಬೆಲೆಗಳು ರಾಜ್ಯ ಮತ್ತು ನಗರಗಳಿಗೆ ಅನುಗುಣವಾಗಿ ಬದಲಾಗಬಹುದು)
ಸ್ಟೆಲ್ತ್ ಸಿಲ್ವರ್, ರೇಸಿಂಗ್ ರೆಡ್, ಟರ್ಬೊ ಬ್ಲೂ ಮತ್ತು ನೈಟ್ರೋ ಗ್ರೀನ್‌ನಂತಹ ಆಕರ್ಷಕ ಬಣ್ಣಗಳಲ್ಲಿ ಈ ಸ್ಕೂಟರ್ ಲಭ್ಯವಿದೆ. ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಬಯಸುವ ಯುವ ಸಮುದಾಯಕ್ಕೆ TVS Ntorq 150 ಒಂದು ಅತ್ಯುತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ : ಹೊಸ ವಿನ್ಯಾಸ, ಅದೇ ಕದರ್‌ನೊಂದಿಗೆ ಮತ್ತೆ ಮರಳುತ್ತಿದೆ ಒಂದು ಕಾಲದ ಭಾರತದ ಅಚ್ಚುಮೆಚ್ಚಿನ SUV ರೆನಾಲ್ಟ್ ಡಸ್ಟರ್.
