Close Menu
New Karnataka
    What's Hot

    ಮೊಹಮ್ಮದ್ ಕೈಫ್ ಕಿಡಿ: IPLನಲ್ಲಿ ಕಳಪೆ ಫೀಲ್ಡಿಂಗ್ ಬಗ್ಗೆ ಯುವ ಆಟಗಾರರಿಗೆ ಮಾಜಿ ಕ್ರಿಕೆಟಿಗನ ಖಡಕ್ ಕಿವಿಮಾತು!

    May 18, 2026

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಮೊಹಮ್ಮದ್ ಕೈಫ್ ಕಿಡಿ: IPLನಲ್ಲಿ ಕಳಪೆ ಫೀಲ್ಡಿಂಗ್ ಬಗ್ಗೆ ಯುವ ಆಟಗಾರರಿಗೆ ಮಾಜಿ ಕ್ರಿಕೆಟಿಗನ ಖಡಕ್ ಕಿವಿಮಾತು!

      May 18, 2026

      PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

      May 17, 2026

      ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

      May 17, 2026

      ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

      May 17, 2026

      ₹78,000 ವರೆಗೆ ಸೊಲಾರ್ ಸಬ್ಸಿಡಿ: PM Surya Ghar Yojana ಕುರಿತು ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ವಿವರ

      May 16, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಕಾಂತಾರ ಚಾಪ್ಟರ್ 1: ಮಾಯಕಾರ ಪಾತ್ರದ ರಹಸ್ಯ ರಿವೀಲ್ –ಅದ್ಭುತ ಮಾಸ್ಕ್ ಮೇಕಪ್; ಇವರೇ ಈ ಪಾತ್ರ ಮಾಡಿದ್ದಾರೆಂದು ಯಾರೂ ಉಹಿಸೇ ಇರಲಿಲ್ಲ!
    Entertainment

    ಕಾಂತಾರ ಚಾಪ್ಟರ್ 1: ಮಾಯಕಾರ ಪಾತ್ರದ ರಹಸ್ಯ ರಿವೀಲ್ –ಅದ್ಭುತ ಮಾಸ್ಕ್ ಮೇಕಪ್; ಇವರೇ ಈ ಪಾತ್ರ ಮಾಡಿದ್ದಾರೆಂದು ಯಾರೂ ಉಹಿಸೇ ಇರಲಿಲ್ಲ!

    New KarnatakaBy New KarnatakaOctober 26, 2025Updated:October 26, 20252 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಬೆಂಗಳೂರು, ಅಕ್ಟೋಬರ್ 26, 2025: 2025ರ ಬ್ಲಾಕ್ ಬಸ್ಟರ್ ಸಿನಿಮಾ ‘ಕಾಂತಾರ ಚಾಪ್ಟರ್ 1’ಗೆ ಸಂಬಂಧಿಸಿದ ಒಂದು ಆಸಕ್ತಿಕರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸಿನಿಮಾದ ಪ್ರಮುಖ ಪಾತ್ರವಾದ ‘ಮಾಯಕಾರ’ ರೂಪದ ಮೇಕಪ್ ಪ್ರಕ್ರಿಯೆಯನ್ನು ತೋರಿಸಲಾಗಿದ್ದು, ಇದು ಪ್ರೇಕ್ಷಕರನ್ನು ಆಶ್ಚರ್ಯಕ್ಕೆ ಒಳಪಡಿಸಿದೆ. ಈ ಪಾತ್ರವನ್ನು ಸ್ವತಃ ಸಿನಿಮಾದ ನಾಯಕ ರಿಷಭ್ ಶೆಟ್ಟಿ ಅವರೇ ಅಭಿನಯಿಸಿದ್ದಾರೆ ಎಂಬುದು ಚಿತ್ರತಂಡ ಈ ವಿಡಿಯೋ ಮೂಲಕ ರಿವೀಲ್‌ ಮಾಡಿದೆ. ಈಗ ಈ ವೀಡಿಯೋ ಬಿಡುಗಡೆಯಾದ ನಂತರ, ಅಭಿಮಾನಿಗಳು ಈ ರಹಸ್ಯವನ್ನು ತಿಳಿದು ಆಶ್ಚರ್ಯಗೊಂಡಿದ್ದಾರೆ.

    ‘ಕಾಂತಾರ’ ಸಿನಿಮಾದ ಮೊದಲ ಭಾಗವು ತುಳು ನಾಡಿನ ಸಂಸ್ಕೃತಿ, ದೈವರಾಧನೆ, ಕೋಣಗಳ ಕಂಬಳ, ಕಥೆ ಮತ್ತು ಭಾವನಾತ್ಮಕ ಸೀನ್‌ ಗಳೊಂದಿಗೆ ಜನಪ್ರಿಯವಾಗಿತ್ತು. ಇದರ ಚಾಪ್ಟರ್ 1 ಈಗ 2025ರಲ್ಲಿ ಬಿಡುಗಡೆಯಾಗಿದ್ದು, ಇದರಲ್ಲಿ ‘ಮಾಯಕಾರ’ ಎಂಬ ಪಾತ್ರವು ಕಥೆಯ ಕೇಂದ್ರಬಿಂದುವಾಗಿದೆ. ಈ ಪಾತ್ರದ ರೂಪವು ಕುತೂಹಲಕಾರಿ ಮತ್ತು ರಹಸ್ಯಮಯವಾಗಿದ್ದು, ಚಿತ್ರೀಕರಣ ಸ್ಥಳದಲ್ಲಿ ಈ ಪಾತ್ರದ ಮೇಕಪ್ ತಯಾರಿ ಪ್ರಕ್ರಿಯೆಯನ್ನು ತೋರಿಸುವ ಈ ವೀಡಿಯೋ ಚಿತ್ರತಂಡದಿಂದಲೇ ಬಿಡುಗಡೆಯಾಗಿದೆ. ವೀಡಿಯೋದಲ್ಲಿ ರಿಷಭ್ ಶೆಟ್ಟಿ ಅವರ ಮುಖಕ್ಕೆ ಮಾಸ್ಕ್ ಮೇಕಪ್ ಹಾಕುವ ಪ್ರಕ್ರಿಯೆಯನ್ನು ವಿವರವಾಗಿ ಚಿತ್ರಿಸಲಾಗಿದ್ದು, ಇದು ಅವರನ್ನು ಸಂಪೂರ್ಣವಾಗಿ ಬದಲಾಯಿಸಿ ಮ್ಯಾಜಿಕಲ್ ರೂಪ ನೀಡಿದೆ. ಚಿತ್ರತಂಡದ ಸದಸ್ಯರು ಹೇಳುವಂತೆ, ಈ ಮೇಕಪ್‌ಗಾಗಿ ವಿಶೇಷ ಎಫೆಕ್ಟ್ಸ್ ತಂಡವು ದಿನಗಳ ಕಾಲ ಶ್ರಮಿಸಿದೆ. ನೈಸರ್ಗಿಕ ವಸ್ತುಗಳು, ಸಿನಿಮಾಟಿಕ್ ಟೆಕ್ನಿಕ್‌ಗಳು ಮತ್ತು ರಿಷಭ್ ಅವರ ಅಭಿನಯ ಚಾತುರ್ಯದಿಂದ ‘ಮಾಯಕಾರ’ ಪಾತ್ರವು ಸಿನಿಮಾದಲ್ಲಿ ಅಮೋಘವಾಗಿ ಮೂಡಿ ಬಂದಿದೆ.

    ಇದನ್ನೂ ಓದಿ: ಇವನು ಹೀರೋ ಮಟಿರಿಯಲ್‌ ಅಲ್ಲ ಎಂದು ಅವಮಾನಿಸಿದರು, ಆದರೆ ಮಾಡಿದ 3 ಚಿತ್ರಗಳೂ 100+ ಕೋಟಿ ಗಳಿಕೆ; ಈಗ ಸೌತ್ ಇಂಡಿಯಾದಲ್ಲೇ ಬಹುಬೇಡಿಕೆಯ ನಟ.

    ನೀವೇ ಈ ಪಾತ್ರ ಮಾಡಿರುವಿರಿ ಎಂದು ಉಹಿಸೇ ಇರಲಿಲ್ಲ

    ಈ ವೀಡಿಯೋ ಬಿಡುಗಡೆಯಾಗುವ ಮೊದಲು ಚಿತ್ರತಂಡ ಈ ರಹಸ್ಯವನ್ನು ಗುಟ್ಟಾಗಿ ಇರಿಸಿಕೊಂಡಿತ್ತು, ಏಕೆಂದರೆ ಇದು ಸಿನಿಮಾದ ಕ್ಲೈಮ್ಯಾಕ್ಸ್ ಸೀನ್‌ಗಳಲ್ಲಿ ಪ್ರಮುಖ ಅಂಶವಾಗಿರುತ್ತದೆ. ಆದರೆ ಈಗ ಈ ವೀಡಿಯೋದಿಂದಾಗಿ ಪ್ರೇಕ್ಷಕರು ಈಗಾಗಲೇ ಸಿನಿಮಾದ ಬಗ್ಗೆ ಇನ್ನೂ ಹೆಚ್ಚಿನ ಉತ್ಸುಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋಗೆ ಪ್ರಸಂಶನೀಯ ಪ್ರತಿಕ್ರಿಯೆಗಳು ಬರುತ್ತಿವೆ. ಅಭಿಮಾನಿಗಳು ರಿಷಭ್ ಸರ್ ಅವರ ಮಾರ್ಪಾಡು ಅದ್ಭುತ!”, “ಮಾಯಕಾರ ರೂಪ ನೋಡಿ ಭಯವೇ ಬಂತು, ನೀವೇ ಈ ಪಾತ್ರ ಮಾಡಿರುವಿರಿ ಎಂದು ಉಹಿಸೇ ಇರಲಿಲ್ಲ. ನಿಮ್ಮ ಡೆಡಿಕೇಶನ್‌ ಅದ್ಭುತ!” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಚಿತ್ರ ಬಿಡುಗಡೆಯಾಗಿ ಜಗತ್ತಿನಾದ್ಯಂತ 800 ಕೋಟಿಗೂ ಅಧಿಕ ಗಳಿಕೆಮಾಡಿದೆ. ನಟ ನಿರ್ದೇಶಕ ರಿಷಭ್‌ ಶೆಟ್ಟಿ ದೇಶದಾದ್ಯಂತ ಬಿಡುವಿಲ್ಲದೇ ಪ್ರಚಾರಕಾರ್ಯದಲ್ಲಿ ತೊಡಗಿದ್ದಾರೆ. ಈ ವೀಡಿಯೋ ಸಿನಿಮಾದ ಪ್ರಚಾರಕ್ಕೂ ಸಹಾಯ ಮಾಡಿದ್ದು, ‘ಕಾಂತಾರ ಚಾಪ್ಟರ್ 1’ ಈಗ ಟ್ರೆಂಡಿಂಗ್‌ನಲ್ಲಿ ಇದೆ. ‘ಕಾಂತಾರ’ ಸರಣಿಯ ಈ ಭಾಗದಲ್ಲಿ ರಿಷಭ್ ಶೆಟ್ಟಿ ಅವರ ಅದ್ಭುತ ನಟನೆ ನಿರ್ದೇಶನವಿದ್ದು ಇದರಲ್ಲಿ ಕರ್ನಾಟಕದ ಕರಾವಳಿ ಭಾಗದ ಕಥೆ ಮತ್ತು ಪರಿಸರ ಸಂದೇಶಗಳು ಮುಖ್ಯವಾಗಿವೆ. ಈ ಮೇಕಪ್ ವೀಡಿಯೋಯಿಂದಾಗಿ ಸಿನಿಮಾದ ಬಗ್ಗೆ ಹೆಚ್ಚಿನ ಕುತೂಹಲ ಉಂಟಾಗಿದ್ದು, ರಿಷಭ್ ಶೆಟ್ಟಿ ಅವರಂತಹ ಮಲ್ಟಿ ಟಾಲೆಂಟೆಡ್ ಕಲಾವಿದರಿಂದ ಕನ್ನಡ ಸಿನಿಮಾ ಇನ್ನಷ್ಟು ಎತ್ತರಕ್ಕೇರಲಿದೆ ಎಂಬುದು ಕನ್ನಡ ಚಿತ್ರಾಭಿಮಾನಿಗಳ ಆಶಯವಾಗಿದೆ.

    ಮಾಯಕಾರ ಮೇಕಿಂಗ್‌ ವಿಡೀಯೋ ವಿಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

    box office collection hombale films kannada cinema kantara chapter 1 kantara chapter 1 box office collection rishabh shetty world wide box office collection
    Share. Facebook Twitter WhatsApp LinkedIn Email
    Previous Articleಡಾರ್ಕ್ ಚಾಕೊಲೇಟ್: ಈ ಜನರೇಷನ್‌ಗೆ ಯಾಕಿಷ್ಟು ಇಷ್ಟ ಗೊತ್ತಾ?
    Next Article ಅಂದುಕೊಂಡದ್ದಕ್ಕಿಂತ ಮೊದಲೇ ಕಾಂತಾರ ಚಾಪ್ಟರ್‌ 1 OTTಗೆ; ಬಿಡುಗಡೆಗೆ ಡೇಟ್‌ ಫಿಕ್ಷ್‌.

    Related Posts

    Entertainment

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026
    Entertainment

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Entertainment

    KALKI 2 ಬಿಡುಗಡೆಗೆ ಮುಹೂರ್ತ ಫಿಕ್ಸ್? ಡಿಸೆಂಬರ್‌ನಲ್ಲಿ ಅಬ್ಬರಿಸಲಿದ್ದಾನೆ ‘ಭೈರವ’!

    May 8, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Our Picks

    ಮೊಹಮ್ಮದ್ ಕೈಫ್ ಕಿಡಿ: IPLನಲ್ಲಿ ಕಳಪೆ ಫೀಲ್ಡಿಂಗ್ ಬಗ್ಗೆ ಯುವ ಆಟಗಾರರಿಗೆ ಮಾಜಿ ಕ್ರಿಕೆಟಿಗನ ಖಡಕ್ ಕಿವಿಮಾತು!

    May 18, 2026

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.