ಭಾರತದ ಅತಿದೊಡ್ಡ ಆಟೋಮೊಬೈಲ್ ಕಂಪನಿಯಾದ ಮಾರುತಿ ಸುಜುಕಿ, ತನ್ನ ಹೊಸ ಕಾಂಪ್ಯಾಕ್ಟ್ SUV ಮಾದರಿ ‘ವಿಕ್ಟೋರಿಸ್’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 2025ರ ಸೆಪ್ಟೆಂಬರ್ 22ರಂದು ನವರಾತ್ರಿ ಹಬ್ಬದ ಮೊದಲ ದಿನದಿಂದಲೇ ಈ ಗಾಡಿಯ ಡೆಲಿವರಿ ಗ್ರಾಹಕರಿಗೆ ಆರಂಭವಾಗಿದೆ.
ಎಕ್ಷ್ ಷೋ ರೂಮ್ ಬೆಲೆ ರೂ. 10.50 ಲಕ್ಷದಿಂದ ಆರಂಭವಾಗಿ ರೂ. 19.99 ಲಕ್ಷಗಳವರೆಗೆ ಲಭ್ಯವಿರುವ ಈ SUV, ಪೆಟ್ರೋಲ್, ಸಿಎನ್‌ಜಿ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು ಸಿಟಿಯ ರಸ್ತೆಗಳಿಗೂ ಹಾಗೂ ಹೈವೇಗೆ ಸಹ ಸೂಕ್ತವಾದ, ಆಧುನಿಕತೆಯ ಜೊತೆಗೆ ಸುರಕ್ಷತೆಯನ್ನು ಒಳಗೊಂಡಿದೆ.
ಇಂಜಿನ್ ವಿನ್ಯಾಸದಲ್ಲಿ 1462 ಸಿಸಿ ಮತ್ತು 1490 ಸಿಸಿ (ಎಂ15ಡಿ ಸ್ಟ್ರಾಂಗ್ ಹೈಬ್ರಿಡ್) 3 ಸಿಲಿಂಡರ್ ಪೆಟ್ರೋಲ್ ಇಂಜಿನ್ ಇದ್ದು, ಮ್ಯಾಕ್ಸ್ ಪವರ್ 141.14 ಬಿಎಚ್‌ಪಿ @ 5500 ಆರ್‌ಪಿಎಂ ಮತ್ತು ಟಾರ್ಕ್ 141 ಎನ್‌ಎಂ @ 0-3995 ಆರ್‌ಪಿಎಂ. ಸಿಎನ್‌ಜಿ ವ್ಯಾರಿಯಂಟ್‌ಗೂ 1462 ಸಿಸಿ ಇಂಜಿನ್ ಲಭ್ಯ. ಟ್ರಾನ್ಸ್‌ಮಿಷನ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ (ಇ-ಸಿವಿಟಿ) ಆಯ್ಕೆಗಳೊಂದಿಗೆ ಬರುತ್ತದೆ.
ವಿಕ್ಟೋರಿಸ್ನ ಕೆಲವು ಪ್ರಮುಖ ಆಧುನಿಕ ತಂತ್ರಜ್ಞಾನ ಸೌಲಭ್ಯಗಳು:
ಸುರಕ್ಷತೆ:
ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) – ಬ್ಲೈಂಡ್ ಸ್ಪಾಟ್ ಮಾನಿಟರ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್. 6 ಏರ್‌ಬ್ಯಾಗ್‌ಗಳು, ABS + EBD, ಟ್ರಾಕ್ಷನ್ ಕಂಟ್ರೋಲ್, ESP, TPMS, 360 ಡಿಗ್ರಿ ಕ್ಯಾಮೆರಾ, ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್. ಗ್ಲೋಬಲ್ NCAP ಮತ್ತು ಭಾರತ NCAPರಿಂದ 5 ಸ್ಟಾರ್ ಸುರಕ್ಷತೆ ರೇಟಿಂಗ್.

ಇನ್‌ಫೋಟೈನ್‌ಮೆಂಟ್:
10.1 ಇಂಚ್ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ (ವೈರ್‌ಲೆಸ್), ಬ್ಲೂಟೂಥ್, ವೈ-ಫೈ. ಇನ್ಫಿನಿಟಿ ಪ್ರೀಮಿಯಂ ಸೌಂಡ್ ಸಿಸ್ಟಮ್ (8 ಸ್ಪೀಕರ್‌ಗಳು + ಸಬ್‌ವೂಫರ್), ವೈರ್‌ಲೆಸ್ ಫೋನ್ ಚಾರ್ಜಿಂಗ್, USB ಪೋರ್ಟ್‌ಗಳು (ಮುಂದು-ಹಿಂಭಾಗ).
ಕಂಫರ್ಟ್:
ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಸೀಟ್ ಅಡ್ಜಸ್ಟ್‌ಮೆಂಟ್ (ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್), ವೆಂಟಿಲೇಟೆಡ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್‌ಗಳು (ಮುಂದು-ಹಿಂಭಾಗ), ಕೀ ಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್. ಡ್ರೈವ್ ಮೋಡ್‌ಗಳು: ಇಕೋ, ನಾರ್ಮಲ್, ಸ್ಪೋರ್ಟ್. ರೇನ್ ಸೆನ್ಸಿಂಗ್ ವೈಪರ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು.
ಮೈಲೇಜ್ ಮತ್ತು ಪರ್ಫಾರ್ಮೆನ್ಸ್
ವಿಕ್ಟೋರಿಸ್ ತನ್ನ ಕ್ಲಾಸ್‌ನಲ್ಲಿ ಅತ್ಯುತ್ತಮ ಮೈಲೇಜ್ ನೀಡುತ್ತದೆ. ARAI ಪ್ರಕಾರ:
ಪೆಟ್ರೋಲ್ ವ್ಯಾರಿಯಂಟ್: 19.07 ರಿಂದ 28.65 ಕಿ.ಮೀ./ಲೀ. (ಹೈಬ್ರಿಡ್‌ನಲ್ಲಿ ಹೆಚ್ಚು)
ಸಿಎನ್‌ಜಿ ವ್ಯಾರಿಯಂಟ್: 27.02 ಕಿ.ಮೀ./ಕೆ.ಜಿ.
ಹೈಬ್ರಿಡ್ ತಂತ್ರಜ್ಞಾನದಿಂದಾಗಿ ಸಿಟಿಯಲ್ಲಿ ಸಹ 25+ ಕಿ.ಮೀ./ಲೀ. ಸಾಧ್ಯ. ಇದು ಪರಿಸರ ಸ್ನೇಹಿ ಮತ್ತು ಕಡಿಮೆ ಇಂಧನ ವ್ಯಯದ ಆಯ್ಕೆಯಾಗಿದೆ